top of page

ಚಿಂತಾಮಣಿ: ಹಿಂದೂಗಳಿಗೆ ಹಣ್ಣು ಹಂಪಲು ಪಾನೀಯ ನೀಡಿದ ಮುಸ್ಲಿಮರು

Writer: new waves technology
new waves technology
Feb 3
1 min read

ಚಿಂತಾಮಣಿ: ನಗರದಲ್ಲಿ ಹಿಂದೂ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಮುಸ್ಲಿಮರು ಹಣ್ಣು ಹಂಪಲು, ತಂಪು ಪಾನೀಯ ವಿತರಣೆ ಮಾಡಿದರು. ಈ ಮೂಲಕ ಹಿಂದೂ-ಮುಸ್ಲಿಮರು ಭಾವೈಕ್ಯತೆ ಮೆರೆದರು.

ನಗರದಲ್ಲಿ ಎಂದಿಗೂ ಹಿಂದೂ-ಮುಸ್ಲಿಂ ಘರ್ಷಣೆಯ ಸಣ್ಣ ಪುಟ್ಟ ಘಟನೆಗಳು ನಡೆದಿಲ್ಲ. ಇದೇ ಪರಂಪರೆಯನ್ನು ಮುಮದುವರೆಸಿಕೊಂಡು ಹೋಗಲು ಈ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮುಸ್ಲಿಂ ಮುಖಂಡರು ತಿಳಿಸಿದರು.

ಭಾವೈಕ್ಯತೆಯ ಬುನಾದಿಯನ್ನು ಮತ್ತಷ್ಟು ಬಲಪಡಿಸಿ ದೇಶದ ಏಕತೆ ಎತ್ತಿಹಿಡಿಯಲು ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸಿದ್ದವರಿಗೆ ಸ್ವಾಗತ ನೀಡಿ ತಂಪು ಪಾನೀಯ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದೆವು. ಬಹಳ ಪ್ರೀತಿ, ವಿಶ್ವಾಸದಿಂದ ಹಿಂದೂಗಳು ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ಬಾಂಧವ್ಯ ಮುಂದುವರಿಸಿಕೊಂಡು ಹೋಗುವುದಾಗಿ ಮುಖಂಡ ತೌಫಿಕ್ ತಿಳಿಸಿದರು

Comments


bottom of page