top of page

ಜೈಲಿಗೆ ಹೋಗಿ ಬಂದ್ರು ಬುದ್ಧಿ ಕಲಿಯದ ರಜತ್! ಮತ್ತೊಂದು ಎಡವಟ್ಟು,Video ವೈರಲ್

  • Writer: new waves technology
    new waves technology
  • 2 days ago
  • 1 min read
ಹಿಂದೆ ಬೆಂಕಿ.. ಮುಂದೆ ಮಾಡಿಫೈ ಆಗಿರುವ ಬುಲೆಟ್ ಓಡಿಸುತ್ತಾ ತಾವು ಬರುವ ರೀಲ್ಸ್‌ನ ರಜತ್ ಶೇರ್‌ ಮಾಡಿಕೊಂಡಿದ್ದಾರೆ. ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ’’ ಎಂದು ರಜತ್ ಬರೆದುಕೊಂಡಿದ್ದಾರೆ.
ಹಿಂದೆ ಬೆಂಕಿ.. ಮುಂದೆ ಮಾಡಿಫೈ ಆಗಿರುವ ಬುಲೆಟ್ ಓಡಿಸುತ್ತಾ ತಾವು ಬರುವ ರೀಲ್ಸ್‌ನ ರಜತ್ ಶೇರ್‌ ಮಾಡಿಕೊಂಡಿದ್ದಾರೆ. ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ’’ ಎಂದು ರಜತ್ ಬರೆದುಕೊಂಡಿದ್ದಾರೆ.

‘ಬಿಗ್ ಬಾಸ್’ ಖ್ಯಾತಿಯ ರಜತ್ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕ ರಸ್ತೆಯಲ್ಲೇ ಪೆಟ್ರೋಲ್ ಬಾಂ***ಬ್ ಮಾದರಿಯ ಭೀಕರ ಸ್ಫೋಟ ನಡೆಸಿ ಅದನ್ನು ವೀಡಿಯೊ ಚಿತ್ರೀಕರಿಸುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಹಿಂದೆ ಬಾಯ್ಸ್ ವರ್ಸಸ್ ಗರ್ಲ್ಸ್’ ಶೋ ಶೂಟಿಂಗ್ ಮಧ್ಯೆ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ರಜತ್ ಹಾಗೂ ವಿನಯ್ ವಿರುದ್ಧ ಕೇಸ್‌ ದಾಖಲಾಗಿ, ಇಬ್ಬರೂ ಪರಪ್ಪನ ಅಗ್ರಹಾರ ಜೈಲು ದರ್ಶನ ಮಾಡಿ ಬಂದಿದ್ದರು. ಇದಾದ ಬಳಿಕ ಮೈಸೂರಿನ ಪಾರಂಪರಿಕ ಕಟ್ಟಡದ ಮುಂದೆ ಫೋಟೋಶೂಟ್ ಮಾಡಿಸಿ ರಜತ್ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಮತ್ತೊಂದು ಅದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದಾರೆ.

ಹಿಂದೆ ಬೆಂಕಿ.. ಮುಂದೆ ಮಾಡಿಫೈ ಆಗಿರುವ ಬುಲೆಟ್ ಓಡಿಸುತ್ತಾ ತಾವು ಬರುವ ರೀಲ್ಸ್‌ನ ರಜತ್ ಶೇರ್‌ ಮಾಡಿಕೊಂಡಿದ್ದಾರೆ. ಇದಕ್ಕೆ, ಸುಮ್ಮನೆ ತಮಾಷೆಗೆ ಮಾಡಿರೋ ಶೂಟ್. ಇದಕ್ಕೂ ಒಂದು ಕೇಸ್ ಹಾಕ್ಬೇಡ್ರಪ್ಪಾ ರಾಜ’’ ಎಂದು ರಜತ್ ಬರೆದುಕೊಂಡಿದ್ದಾರೆ. ಜೊತೆಗೆ, ‘’ಈ ಕಂಟೆಂಟ್ ಕ್ರಿಯೇಟ್ ಮಾಡಿರೋದು ಚಿತ್ರೀಕರಣದ ಸಲುವಾಗಿ ಮಾತ್ರ. ಎಲ್ಲಾ ಅವಶ್ಯಕ ಸುರಕ್ಷತಾ ಕ್ರಮಗಳನ್ನ ಕೈಗೊಂಡು, ಪರಿಣತಿ ಹೊಂದಿರುವ ತಜ್ಞರಿಂದ ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ಈ ಚಿತ್ರೀಕರಣ ಮಾಡಿದ್ದೇವೆ. ಇದನ್ನ ಅನುಕರಿಸಬೇಡಿ. ಇದನ್ನ ಮರುಸೃಷ್ಟಿಸಬೇಡಿ. ಬೆಂಕಿ ಅಪಾಯಕಾರಿ. ಚಿತ್ರೀಕರಣದ ವೇಳೆ ಹೆಲ್ಮೆಟ್ ಧರಿಸಿಲ್ಲ. ಇದು ಅಸುರಕ್ಷಿತ. ರಸ್ತೆ ಸುರಕ್ಷತಾ ಕ್ರಮಗಳನ್ನ ಪಾಲಿಸಿ. ವಾಹನ ಚಲಾಯಿಸುವಾಗ ತಪ್ಪದೆ ಹೆಲ್ಮೆಟ್ ಧರಿಸಿ. ಧೂಮಪಾನ ಆರೋಗ್ಯಕ್ಕೆ ಹಾನಿಕರ. ಈ ವಿಡಿಯೋ ಧೂಮಪಾನವನ್ನ ಪ್ರಮೋಟ್ ಮಾಡುವುದಿಲ್ಲ’’ ಎಂಬ ಡಿಸ್‌ಕ್ಲೈಮರ್‌ನ ತಮ್ಮ ರೀಲ್ಸ್‌ ಜೊತೆಗೆ ಹಾಕಿದ್ದಾರೆ.

Comments


bottom of page