top of page

ಜಗತ್ತಿನಲ್ಲಿ ಇರೋದೇ 195 ರಾಷ್ಟ್ರ: 211 ದೇಶಗಳಿಗೆ ಫಿಫಾ ಸದಸ್ಯತ್ವ ಹೇಗೆ ಸಾಧ್ಯ?

Writer: new waves technology
new waves technology
Dec 19, 2025
1 min read

ಕೋಯಿಕ್ಕೋಡ್ ಜಿಲ್ಲೆಯಲ್ಲಿ ಹರಿಯುವ ಪುಲ್ಲವೂರ್ ನದಿ ತೀರದಲ್ಲಿ ಅಳವಡಿಸಿದ್ದ ನೇಯ್ಕರ್, ಕ್ರಿಸ್ಟಿಯಾನೊ ರೊನಾಲ್ಲೊ ಹಾಗೂ ಲಿಯೋನೆಲ್ ಮೆಸ್ಸಿ

ಅವರ ಕಟೌಟ್‌ಗಳು





ಕೃಪೆ: ಪಿಟಿಐ

ವಿಶ್ವಸಂಸ್ಥೆಯಲ್ಲಿ ಹೊಂದಿರುವ ಸದಸ್ಯತ್ವದ ಪ್ರಕಾರ ಜಗತ್ತಿನಲ್ಲಿ ಇರುವುದೇ 195 ರಾಷ್ಟ್ರಗಳು. ಹಾಗಿದ್ದಾಗ ಅಂತರರಾಷ್ಟ್ರೀಯ ಫುಟ್‌ಬಾಲ್ ಸಂಘಗಳ ಒಕ್ಕೂಟದ (ಫಿಫಾ) ಸದಸ್ಯತ್ವದ ಪಟ್ಟಿಯಲ್ಲಿ 211 ರಾಷ್ಟ್ರಗಳು ಇರಲು ಹೇಗೆ ಸಾಧ್ಯ?


ಫುಟ್‌ಬಾಲ್ ಮಾಂತ್ರಿಕ, ಅರ್ಜೆಂಟಿನಾದ ಸೂಪರ್‌ಸ್ಟಾರ್ ಲಿಯೊನೆಲ್ ಮೆಸ್ಸಿ ಅವರು ಇತ್ತೀಚೆಗೆ ಭಾರತ ಪ್ರವಾಸ ಕೈಗೊಂಡಿದ್ದರು. 'G.O.A.T Tour of India' ಭಾಗವಾಗಿ ಡಿಸೆಂಬರ್ 13ರಿಂದ 15ರ ವರೆಗಿನ ಮೂರು ದಿನಗಳ ಪ್ರವಾಸದ ವೇಳೆ ಅವರು, ಕೋಲ್ಕತ್ತ, ಹೈದರಾಬಾದ್, ಮುಂಬೈ ಮತ್ತು ನವದೆಹಲಿಗೆ ಭೇಟಿ ನೀಡಿದ್ದರು.

ಮೊದಲ ದಿನವೇ ಗದ್ದಲವಾಗಿತ್ತು. ಕೋಲ್ಕತ್ತದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು.

ಬಿಗಿ ಭದ್ರತೆಯೊಂದಿಗೆ ಕ್ರೀಡಾಂಗಣ ಪ್ರವೇಶಿಸಿದ ಮೆಸ್ಸಿ ಅವರನ್ನು ಗಣ್ಯರು, ಆಯೋಜಕರು, ರಾಜಕಾರಣಿಗಳು, ಖ್ಯಾತನಾಮರು ಹಾಗೂ ಭದ್ರತಾ ಸಿಬ್ಬಂದಿ ಸುತ್ತುವರಿದಿದ್ದರು. ಮೈದಾನದಲ್ಲಿ ಸ್ವಲ್ಪ ದೂರ ನಡೆದು ಬಂದು ಅಭಿಮಾನಿಗಳತ್ತ ಕೈಬೀಸಿದ್ದ ಮೆಸ್ಸಿ, ನಿಗದಿಗಿಂತ ಮೊದಲೇ ನಿರ್ಗಮಿಸಿದ್ದರು. ಇದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತ್ತು.

ರಾತ್ರಿಯಿಡೀ ಕಾದರೂ, ಸಾವಿರಾರು ರೂಪಾಯಿ ಕೊಟ್ಟು ಕ್ರೀಡಾಂಗಣಕ್ಕೆ ಬಂದರೂ ನೆಚ್ಚಿನ ತಾರೆಯನ್ನು ನೋಡಲಾಗಲಿಲ್ಲ ಎಂದು ಆಕ್ರೋಶಗೊಂಡು, ಕುರ್ಚಿ, ಬಾಟಲಿಗಳನ್ನು ಕ್ರೀಡಾಂಗಣದ ಎಸೆದಿದ್ದರು. ದಾಂದಲೆಯೇ ನಡೆದುಹೋಯಿತು. ಕ್ರೀಡಾಂಗಣ ರಣಾಂಗಣವಾಗಿ ಬದಲಾಗಿತ್ತು.

ಈ ಕುರಿತು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಕಲ್ಯಾಣ್ ಚೌಬೆ ಬೇಸರ ವ್ಯಕ್ತಪಡಿಸಿದ್ದರು.

Comments


bottom of page