top of page

ಟ್ರಂಪ್ ಹೇಳಿದಂತೆ ಮೋದಿ ಜಿಗಿಯುತ್ತಾರೆ,ಮಲಗಿ ಅಂದ್ರೆ ಮಲಗುತ್ತಾರೆ: ರಾಹುಲ್ ಗಾಂಧಿ

Writer: new waves technology
new waves technology
Apr 18
1 min read

ರಾಣಿಪೇಟೆ (ತಮಿಳುನಾಡು): ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಯಂತ್ರಣದಲ್ಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ನಿನ್ನೆ ಸಂಸತ್ತಿನಲ್ಲಿ ಪ್ರಧಾನಿ ಮೋದಿ ಅವರ ಮುಖದಲ್ಲಿ ಆತ್ಮವಿಶ್ವಾಸದ ಕೊರತೆಯನ್ನು ನೀವು ನೋಡಿದ್ದೀರಿ. ಅವರಿಗೆ ವಿಪಕ್ಷಗಳನ್ನು ಎದುರಿಸಲು ಸಾಧ್ಯವಾಗದೆ ಪಕ್ಕಕ್ಕೆ ತಿರುಗಿ ಕುಳಿತಿದ್ದರು. ಮೋದಿ ಜೀ ಅಮೆರಿಕದ ನಿಯಂತ್ರಣದಲ್ಲಿದ್ದು, ನಮ್ಮ ದೇಶವನ್ನೇ ಮಾರಾಟ ಮಾಡುವಂತಹ ಭಾರತ-ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿರುವುದೇ ಇದಕ್ಕೆ ಮುಖ್ಯ ಕಾರಣ' ಎಂದು ಟೀಕಿಸಿದ್ದಾರೆ.

'ಡೊನಾಲ್ಡ್ ಟ್ರಂಪ್ ಜಿಗಿಯಲು ಹೇಳಿದರೆ ಮೋದಿ ಜಿಗಿಯುತ್ತಾರೆ. ಮಲಗಲು ಹೇಳಿದರೆ ಮೋದಿ ಮಲಗುತ್ತಾರೆ. ಏಕೆಂದರೆ ಮೋದಿಯವರನ್ನು ಟ್ರಂಪ್ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ. ಅವರು ಏಕೆ ಹೇಗೆ ನಿಯಂತ್ರಿಸುತ್ತಿದ್ದಾರೆ ಎಂದು ಗಮನಿಸುವುದಾದರೆ... ಎಪ್‌ಸ್ಟೈನ್ ಫೈಲ್‌ಗಳ ಮೂಲಕ ಮೋದಿಯನ್ನು ನಿಯಂತ್ರಿಸುತ್ತಿದ್ದಾರೆ. ಮೋದಿಯವರ ಹಣಕಾಸು ನೀತಿ, ಅದಾನಿ ಜತೆಗಿರುವ ಸಂಬಂಧದ ಬಗ್ಗೆ ಟ್ರಂಪ್‌ಗೆ ಅರಿವಿದೆ' ಎಂದು ರಾಹುಲ್ ಗುಡುಗಿದ್ದಾರೆ.

'ಮೋದಿ ಅವರು ತಮಿಳುನಾಡು ಮುಖ್ಯಮಂತ್ರಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಎಐಎಡಿಎಂಕೆ ಅಧಿಕಾರಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Comments


bottom of page