top of page

ತಾಂತ್ರಿಕ ದೋಷ: ಜಾಗತಿಕವಾಗಿ ChatGPT ತಾತ್ಕಾಲಿಕ ಸ್ಥಗಿತ

  • Writer: new waves technology
    new waves technology
  • Jan 23
  • 1 min read

ವೆಬ್‌ಸೈಟ್ ದೋಷ ಪುಟವನ್ನು ಪ್ರದರ್ಶಿಸುವುದರೊಂದಿಗೆ ಮತ್ತು ಅಪ್ಲಿಕೇಶನ್‌ಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ChatGPTಯನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.

ree

ನವದೆಹಲಿ: ಜನಪ್ರಿಯ AI ಚಾಟ್‌ಬಾಟ್ ChatGPT ಗುರುವಾರ ಜಾಗತಿಕವಾಗಿ ತಾತ್ಕಾಲಿಕ ಸ್ಥಗಿತಕ್ಕೀಡಾಗಿದೆ.

ವೆಬ್‌ಸೈಟ್ ದೋಷ ಪುಟವನ್ನು ಪ್ರದರ್ಶಿಸುವುದರೊಂದಿಗೆ ಮತ್ತು ಅಪ್ಲಿಕೇಶನ್‌ಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ChatGPTಯನ್ನು ಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ.


ChatGPTಯ ಹಿಂದಿನ ಕಂಪನಿಯಾದ OpenAI, "ಹೆಚ್ಚಿದ ದೋಷಗಳಿವೆ" ಎಂದು ಒಪ್ಪಿಕೊಂಡಿದೆ ಮತ್ತು ಸಮಸ್ಯೆಯ ಬಗ್ಗೆ ತನಿಖೆ ಮಾಡುತ್ತಿದೆ. ಬಳಕೆದಾರರು ChatGPT ನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕೋಡಿಂಗ್ ಮತ್ತು ಬರವಣಿಗೆಯಂತಹ ಕಾರ್ಯಗಳಿಗಾಗಿ ಅದನ್ನು ಅವಲಂಬಿಸಿರುವ ಅನೇಕರಿಗೆ ಕೆಲಸ ಮತ್ತು ಅಧ್ಯಯನಕ್ಕೆ ಅಡ್ಡಿಯುಂಟಾದಂತಾಗಿದೆ.

X (ಹಿಂದೆ ಟ್ವಿಟರ್) ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ChatGPT ಸ್ಥಗಿತ, ಅನಿರೀಕ್ಷಿತ ಅಡಚಣೆಗಳನ್ನು ಎದುರಿಸುತ್ತಿರುವ ಬಗ್ಗೆ ಬಳಕೆದಾರರು ನಿರಾಶೆ ವ್ಯಕ್ತಪಡಿಸಿದ್ದಾರೆ.

Comments


bottom of page