top of page

ತಂದೆಯ ನಿಧನ: ಅರ್ಧದಲ್ಲೇ ತವರಿಗೆ ಮರಳಿದ ಪಾಕ್‌ ತಂಡದ ನಾಯಕಿ ಫಾತಿಮಾ ಸನಾ

Writer: new waves technology
new waves technology
Oct 24, 2024
1 min read











ದುಬೈ:  ಪಾಕಿಸ್ತಾನ ಕ್ರಿಕೆಟ್‌ ತಂಡದ ನಾಯಕಿ ಫಾತಿಮಾ ಸನಾ ಅವರು ತಂದೆಯ ನಿಧನದಿದಾಗಿ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿಯಿಂದ ಅರ್ಧದಲ್ಲೇ ತವರು ಕರಾಚಿಗೆ ಮರಳಬೇಕಾಗಿದೆ. ಅವರು ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯ ಕಳೆದುಕೊಳ್ಳಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಗುರುವಾರ ಪ್ರಕಟಿಸಿದೆ.

ಗುರುವಾರ ಬೆಳಿಗ್ಗೆ ಫಾತಿಮಾ ತಂದೆ ನಿಧನರಾಗಿದ್ದರು. ಅವರು ತವರಿಗೆ ಹಿಂತಿರುಗಲು ಪಿಸಿಬಿ ವ್ಯವಸ್ಥೆ ಮಾಡಿದೆ. ಶುಕ್ರವಾರ ಪಾಕಿಸ್ತಾನ ತಂಡವು ಆಸ್ಟ್ರೇಲಿಯಾವನ್ನು ಎದುರಿಸಲಿದ್ದು ಆ ಪಂದ್ಯಕ್ಕೆ ಸನಾ ಅಲಭ್ಯರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಉಪನಾಯಕಿ ಮುನೀಬಾ ಅಲಿ ಅವರು ಶುಕ್ರವಾರದ ಪಂದ್ಯಕ್ಕೆ ನಾಯಕತ್ವ ವಹಿಸುವರು.

22 ವರ್ಷದ ಫಾತಿಮಾ ಸನಾ ತಂಡದ ಪ್ರಮುಖ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ.

‘ಎ’ ಗುಂಪಿನಲ್ಲಿ ಎರಡು ಪಂದ್ಯಗಳಿಂದ ಎರಡು ಪಾಯಿಂಟ್ಸ್‌ ಗಳಿಸಿರುವ ಪಾಕಿಸ್ತಾನವು, ಆಸ್ಟ್ರೇಲಿಯಾ, ಭಾರತ ತಂಡಗಳ ಬಳಿಕ ಮೂರನೇ ಸ್ಥಾನದಲ್ಲಿದೆ. ಸೆಮಿಫೈನಲ್‌ಗೇರುವ ಅವಕಾಶ ಜೀವಂತವಾಗಿಡಲು ಪಾಕಿಸ್ತಾನ ಉಳಿದ ಎರಡು ಪಂದ್ಯಗಳಲ್ಲಿ ಕಡೇಪಕ್ಷ ಒಂದನ್ನು ಗೆಲ್ಲಲೇಬೇಕಿದೆ.

Comments


bottom of page