ನರವಣೆ ಅವರ 'ಅಪ್ರಕಟಿತ ಆತ್ಮಚರಿತ್ರೆ' ವಿಚಾರ: ಲೋಕಸಭೆಯಲ್ಲಿ ಮುಂದುವರಿದ ಗದ್ದಲ
- new waves technology
- 18 hours ago
- 1 min read

ನವದೆಹಲಿ: ಭಾರತದ ಸೇನೆಯ ಮಾಜಿ ಮುಖ್ಯಸ್ಥ ಎಂ.ಎಂ.ನರವಣೆ ಅವರ 'ಅಪ್ರಕಟಿತ ಆತ್ಮಚರಿತ್ರೆ' ಪುಸ್ತಕದಲ್ಲಿನ ವಿಚಾರವನ್ನು ಉಲ್ಲೇಖಿಸಲು ಅನುಮತಿ ನೀಡಬೇಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬುಧವಾರವೂ ಲೋಕಸಭೆಯಲ್ಲಿ ಪಟ್ಟು ಹಿಡಿದರು.
ಇನ್ನೊಂದೆಡೆ, ನೆಹರೂ-ಗಾಂಧಿ ಕುಟುಂಬದ ಬಗೆಗಿನ ಮಾಹಿತಿಗಳನ್ನು ಬಹಿರಂಗಪಡಿಸಲು ಸರಣಿ ಪುಸ್ತಕಗಳನ್ನು ತಂದಿದ್ದು, ಅವುಗಳನ್ನು ಪ್ರಸ್ತಾಪಿಸಲು ಅವಕಾಶ ನೀಡಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಒತ್ತಾಯಿಸಿದರು.
- ಇವುಗಳ ಪರಿಣಾಮ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ಬುಧವಾರವೂ ಮುಂದುವರಿದು, ಕಲಾಪ ಗದ್ದಲದ ಗೂಡಾಗಿ ಪರಿಣಮಿಸಿತು. ಪರಿಸ್ಥಿತಿ ಯನ್ನು ತಿಳಿಗೊಳಿಸಲು ಸ್ಪೀಕರ್ ಸದನವನ್ನು ಎರಡು-ಮೂರು ಬಾರಿ ಮುಂದೂಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸಂಜೆ 5 ಗಂಟೆಯ ಬಳಿಕ ಮಾತನಾಡಬೇಕಿತ್ತು. ಆದರೆ ಕಾಂಗ್ರೆಸ್ ಸದಸ್ಯರು ಸೇರಿದಂತೆ, ವಿವಿಧ ವಿರೋಧ ಪಕ್ಷಗಳ ಸದಸ್ಯರು ಬ್ಯಾನರ್‌ಗಳು, ಫಲಕಗಳನ್ನು ಪ್ರದರ್ಶಿಸುತ್ತಾ ಸ್ಪೀಕರ್ ಪೀಠದ ಮುಂಭಾಗ ಪ್ರತಿಭಟಿಸಿದರು. ವಿಪಕ್ಷಗಳ ಕೆಲ ಮಹಿಳಾ ಸದಸ್ಯರು ಪ್ರಧಾನಿ ಕುರ್ಚಿಯನ್ನು ಸುತ್ತುವರಿದು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಪದೇ ಪದೇ ಗದ್ದಲ ಮುಂದುವರಿದಿದ್ದರಿಂದ ಸ್ಪೀಕರ್ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.










Comments