top of page

ನರವಣೆಯವರ ಪುಸ್ತಕದ ಭಯದಿಂದ ಮೋದಿ ಸಂಸತ್ತಿಗೆ ಬರುತ್ತಿಲ್ಲ: ರಾಹುಲ್ ಗಾಂಧಿ

Writer: new waves technology
new waves technology
Feb 9
1 min read

ನವದೆಹಲಿ: ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆಯವರ ಪುಸ್ತಕಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪತಿ ಭಾಷಣಕ್ಕೆ ಮೇಲೆ ವಂದನಾ ನಿರ್ಣಯ ಸಲ್ಲಿಸಲು ಲೋಕಸಭೆಗೆ ಬರಲಿಲ್ಲ, ಸಂಸದರಿಗೆ ಹೆದರಿ ಅಲ್ಲ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಸದಸ್ಯರಿಂದ ಮೋದಿಗೆ ಬೆದರಿಕೆ ಇದೆ ಎಂದಾದರೆ ಎಫ್‌ಐಆರ್ ದಾಖಲಿಸಿ ಎಂದೂ ರಾಹುಲ್ ಗಾಂಧಿ ಸವಾಲೆಸೆದಿದ್ದಾರೆ.

ಪ್ರಧಾನಿಗೆ ವಿರೋಧ ಪಕ್ಷಗಳ ಸದಸ್ಯರಿಂದ ಬೆದರಿಕೆ ಇದೆ. ಹೀಗಾಗಿ ಸದನಕ್ಕೆ ಬರಬೇಡಿ ಎಂದು ನಾನೇ ಹೇಳಿದ್ದೆ ಎಂದು ಸ್ಪೀಕ‌ರ್ ಓಂ ಬಿರ್ಲಾ ಗುರುವಾರ ಹೇಳಿದ್ದರು.

“ಬಜೆಟ್ ಮೇಲೆ ಚರ್ಚೆ ನಡೆಸಲು ಸರ್ಕಾರಕ್ಕೆ ಭಯ. ಯಾಕೆಂದರೆ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ, ಅದು ನಡೆದ ರೀತಿ ಹಾಗೂ ರೈತರ ಮೇಲೆ ಅದು ಬೀರುವ ಪರಿಣಾಮ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

'ಸದಸ್ಯರಿಂದ ಪ್ರಧಾನಿಗೆ ಬೆದರಿಕೆ ಇದೆ ಎಂದು ಹರಿಬಿಟ್ಟಿರುವುದು ನಮ್ಮ ಮನಸ್ಸನ್ನು ಕಲಕಿದೆ. ಹಾಗೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಧಾನಿ ಸಂಸತ್ತಿಗೆ ಬರದೇ ಇದ್ದಿದ್ದು ಸದಸ್ಯರಿಂದ ಬೆದರಿಕೆ ಇದೆ ಎನ್ನುವ ಕಾರಣಕ್ಕೆ ಅಲ್ಲ, ಸತ್ಯವನ್ನು ಎದುರಿಸಲು ಅವರಿಂದ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Comments


bottom of page