top of page

ಪವಾರ್‌ ಕುಟುಂಬಕ್ಕೆ ಮತ್ತೊಂದು ಶಾಕ್: ಶರದ್ ಪವಾರ್‌ ಆಸ್ಪತ್ರೆಗೆ ದಾಖಲು

Writer: new waves technology
new waves technology
Feb 9
1 min read

ಮುಂಬೈ: ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ, ಪವಾರ್ ಕುಟುಂಬದ ಹಿರಿಯ ನಾಯಕ ಶರದ್ ಪವಾರ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶರದ್ ಪವಾ‌ರ್ ಅವರು ಪುಣೆಯ ರೂಬಿ ಕ್ಲಿನಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

85 ವರ್ಷದ ಪವಾರ್ ಅವರು ಕೆಲ ದಿನಗಳಿಂದ ಗಂಟಲು ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಈ ಬಗ್ಗೆ ಪವಾರ್ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಎರಡು ವಾರದ ಹಿಂದೆ ಪವಾರ್ ಅವರ ಸಹೋದರಳಿಯ ಅಜಿತ್ ಪವಾರ್ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದರು.

Comments


bottom of page