ಫೆ. 1ರಿಂದ ಸಿಗರೇಟು, ಗುಟ್ಕಾ ತುಟ್ಟಿ: ದರ ಏರಿಕೆ ಮಾಹಿತಿ ಇಲ್ಲಿದೆ
- new waves technology
- Jan 31
- 1 min read

ನವದೆಹಲಿ: ಸಿಗರೇಟಿನ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಹಾಗೂ ಪಾನ್ ಮಸಾಲಾಗಳ ಮೇಲೆ ವಿಧಿಸಿರುವ ಆರೋಗ್ಯ ಸೆಸ್ ಹಾಗೂ ಶೇ 40ರಷ್ಟು ಹೆಚ್ಚುವರಿ ಜಿಎಸ್‌ಟಿ ಫೆ. 1ರಿಂದ ಜಾರಿಗೆ ಬರಲಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಹೆಚ್ಚಳವಾಗಲಿದೆ.
2017ರ ಜುಲೈ 1ಕ್ಕೆ ಜಾರಿಗೆ ಬಂದ ಜಿಎಸ್‌ಟಿಯಲ್ಲಿ ಸಿಗರೇಟು ಮತ್ತು ಪಾನ್ ಮಸಾಲಾ ಮೇಲೆ ಹಾಲಿ ಇರುವ ಶೇ 28ರ ಜಿಎಸ್‌ಟಿ ಬದಲಾಗಲಿದೆ. ಆರೋಗ್ಯದ ಮೇಲೆ ಹಾನಿ ಮಾಡಬಹುದಾದ ಈ ಉತ್ಪನ್ನಗಳ ಮೇಲೆ ಪರಿಹಾರ ಸೆಸ್ ಕೂಡಾ ಈಗ ವಿಧಿಸಲಾಗಿದೆ.
ಈ ಉತ್ಪನ್ನಗಳ ಮೇಲೆ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ಆಧಾರಿತ ಮೌಲ್ಯಮಾಪನ ಕಾರ್ಯವಿಧಾನವೂ ಫೆ. 1ರಿಂದ ಜಾರಿಗೆ ಬರಲಿದೆ. ಇದರಲ್ಲಿ ಅಗಿಯುವ ತಂಬಾಕು, ಫಿಲ್ಟರ್ ಖೈನಿ, ಜರ್ದಾ, ಸುವಾಸನೆ ಭರಿತ ತಂಬಾಕು, ಗುಟ್ಕಾ ಸೇರಿದೆ. ಈ ಉತ್ಪನ್ನಗಳ ಮೇಲೆ ನಮೂದಿಸಲಾದ ಬೆಲೆಯನ್ನು ಆಧರಿಸಿ ಜಿಎಸ್‌ಟಿ ನಿರ್ಧರಿಸಲಾಗುತ್ತದೆ.
ಹೊಸ ಪರವಾನಿಗೆ ಅರ್ಜಿ ಸಲ್ಲಿಸುವುದು ಅಗತ್ಯ
ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ಕಾನೂನು ಅಡಿಯಲ್ಲಿ ಪಾನ್ ಮಸಾಲಾ ತಯಾರಿಕ ಕಂಪನಿಗಳು ಫೆ.1ರಿಂದ ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸಬೇಕು. ಇಂಥ ಉತ್ಪನ್ನಗಳ ತಯಾರಕರು ಪ್ಯಾಕಿಂಗ್ ಯಂತ್ರದ ಬಳಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಮತ್ತು ಅವುಗಳ ದೃಶ್ಯಗಳನ್ನು ಮುಂದಿನ 24 ತಿಂಗಳವರೆಗೂ ಕಾಯ್ದುಕೊಳ್ಳಬೇಕಾದ್ದು ಕಡ್ಡಾಯ ಎಂಬ ಷರತ್ತು ವಿಧಿಸಲಾಗಿದೆ.
ಘಟಕದಲ್ಲಿರುವ ಯಂತ್ರಗಳ ಸಂಖ್ಯೆ ಮತ್ತು ಅವುಗಳ ಸಾಮರ್ಥ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಒಂದೊಮ್ಮೆ ಯಾವುದೇ ಯಂತ್ರ ಕನಿಷ್ಠ 15 ದಿನಗಳವರೆಗೆ ಕಾರ್ಯ ನಿರ್ವಹಿಸದಿದ್ದರೆ ಅಬಕಾರಿ ಸುಂಕ ವಿನಾಯಿತಿಗೆ ಅರ್ಜಿ ಸಲ್ಲಿಸಬಹುದಾಗಿದೆ.





Comments