ಬ್ರಹ್ಮೋಸ್, S-400 ಗೂ ಠಕ್ಕರ್? ಚೀನಾ ಸೇನೆ ಬತ್ತಳಿಕೆಯಲ್ಲಿರುವ ಐದು ಭಯಾನಕ, ವಿಧ್ವಂಸಕ ಶಸ್ತ್ರಾಸ್ತ್ರಗಳು ಇವು!
- new waves technology
- Sep 11
- 1 min read
ಇದೇ ಮೊದಲ ಬಾರಿಗೆ ಜೆಟ್ ಫೈಟರ್‌ಗಳು, ಕ್ಷಿಪಣಿಗಳು ಮತ್ತು ಇತ್ತೀಚಿನ ಎಲೆಕ್ಟ್ರಾನಿಕ್ ಯುದ್ಧ ಯಂತ್ರಾಂಶ ಸೇರಿದಂತೆ ತನ್ನ ಕೆಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ವಿಶ್ವದ ಎದುರು ಅನಾವರಣಗೊಳಿಸಿದೆ.

ಬೀಜಿಂಗ್: ಬೀಜಿಂಗ್‌ನಲ್ಲಿ ನಡೆದ 2ನೇ ಜಾಗತಿಕ ಯುದ್ಧದ ವಿಜಯ ದಿನದ ಮೆರವಣಿಗೆಯಲ್ಲಿ ಚೀನಾ ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ಮೂಲಕ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.
ಹೌದು.. ಇದೇ ಮೊದಲ ಬಾರಿಗೆ ಜೆಟ್ ಫೈಟರ್‌ಗಳು, ಕ್ಷಿಪಣಿಗಳು ಮತ್ತು ಇತ್ತೀಚಿನ ಎಲೆಕ್ಟ್ರಾನಿಕ್ ಯುದ್ಧ ಯಂತ್ರಾಂಶ ಸೇರಿದಂತೆ ತನ್ನ ಕೆಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ವಿಶ್ವದ ಎದುರು ಅನಾವರಣಗೊಳಿಸಿದೆ. ಈ ಮೂಲದ ಅದು ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿದೆ.
ಎರಡನೇ ಮಹಾಯುದ್ಧದಲ್ಲಿ ಜಪಾನಿನ ಆಕ್ರಮಣದ ವಿರುದ್ಧ ಚೀನಾ ವಿಜಯದ 80 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದ ಮೆರವಣಿಗೆಯಲ್ಲಿ ನೂರಾರು ಸೈನಿಕರು ಭಾಗವಹಿಸಿದ್ದರು.
ವಿಶ್ವದ 26 ನಾಯಕರ ಎದುರು ಚೀನಾ ವಿರಾಟ ರೂಪ ದರ್ಶನ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ಇರಾನ್, ಮಲೇಷ್ಯಾ, ಮ್ಯಾನ್ಮಾರ್, ಮಂಗೋಲಿಯಾ, ಇಂಡೋನೇಷ್ಯಾ, ಜಿಂಬಾಬ್ವೆ ಮತ್ತು ಮಧ್ಯ ಏಷ್ಯಾದ ದೇಶಗಳ ನಾಯಕರು ಸೇರಿದಂತೆ ಇಪ್ಪತ್ತಾರು ವಿದೇಶಿ ನಾಯಕರ ಎದುರು ಚೀನಾ ತನ್ನ ವಿಶ್ವರೂಪ ದರ್ಶನ ಮಾಡಿದೆ.
ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್ ವಿದೇಶಿ ಅತಿಥಿಗಳನ್ನು ಸ್ವಾಗತಿಸಿದರು.










Comments