top of page

ಭಾರತ–ಅಮೆರಿಕ ಮುಕ್ತ ವ್ಯಾಪಾರ ಒಪ್ಪಂದ | ಕೃಷಿ, ಹೈನುಗಾರಿಕೆಗೆ ರಕ್ಷಣೆ: ಗೋಯಲ್

Writer: new waves technology
new waves technology
Feb 4
1 min read

ನವದೆಹಲಿ: ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುತ್ತಿದ್ದು, ಕೃಷಿ ಮತ್ತು ಹೈನುಗಾರಿಕೆ ವಲಯಗಳ ಹಿತಾಸಕ್ತಿ ಯನ್ನು ಒಪ್ಪಂದದ ಪರಿಣಾಮದಿಂದ ರಕ್ಷಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸ್ಪಷ್ಟಪಡಿಸಿದರು.

ಭಾರತದಿಂದ ಆಮದಾಗುವ ಸರಕುಗಳ ಮೇಲಿನ ಸುಂಕ ಶೇಕಡ 50ರಷ್ಟು ಇದ್ದಿದ್ದನ್ನು ಶೇ 18ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿದ ನಂತರದಲ್ಲಿ ಗೋಯಲ್ ಪತ್ರಿಕಾಗೋಷ್ಠಿ ನಡೆಸಿದರು. ಅಮೆರಿಕ ಮತ್ತು ಭಾರತ ಜಂಟಿ ಹೇಳಿಕೆಯೊಂದನ್ನು ಶೀಘ್ರವೇ ಹೊರಡಿಸಲಿವೆ, ಅದು ಒಪ್ಪಂದದ ವಿವರಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಚೌಕಷ್ಟೊಂದನ್ನು ಎರಡೂ ದೇಶಗಳು ಅಂತಿಮಗೊಳಿಸಿವೆ.

ವ್ಯಾಪಾರ ಒಪ್ಪಂದವು ದೇಶದ ಜನರಿಗೆ ಭಾರಿ ಅವಕಾಶಗಳನ್ನು ಒದಗಿಸಲಿದೆ ಎಂದು ಗೋಯಲ್ ಭರವಸೆ ನೀಡಿದರು. 'ಒಪ್ಪಂದವು ಸೂಕ್ಷ್ಮವಲಯಗಳ ಹಿತವನ್ನು ರಕ್ಷಿಸಲಿದೆ, ಕೃಷಿ ಹಾಗೂ ಹೈನುಗಾರಿಕೆ ವಲಯಗಳ ಹಿತವನ್ನು ಪೂರ್ಣವಾಗಿ ಕಾಯಲಿದೆ' ಎಂದು ಹೇಳಿದರು.

ಭಾರತದಲ್ಲಿ ಕಾರ್ಮಿಕರ ಭಾಗೀದಾರಿಕೆಯು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿರುವ ಜವಳಿ, ಪ್ಲಾಸ್ಟಿಕ್, ಉಡುಪು, ಮನೆಗಳ ಅಲಂಕಾರದಲ್ಲಿ ಬಳಸುವ ಉತ್ಪನ್ನಗಳು, ಚರ್ಮೋದ್ಯಮ ಮತ್ತು ಪಾದರಕ್ಷೆ, ಹವಳ ಮತ್ತು ಆಭರಣ, ಸಾವಯವ ರಾಸಾಯನಿಕಗಳು, ರಬ್ಬರ್ ಉತ್ಪನ್ನ ಗಳು, ಯಂತ್ರೋಪಕರಣಗಳು, ವಿಮಾನ ತಯಾರಿಕೆ ವಲಯಗಳಿಗೆ ಒಪ್ಪಂದವು ದೊಡ್ಡ ಅವಕಾಶಗಳ ಬಾಗಿಲು ತೆರೆಯಲಿದೆ ಎಂದರು.

ಈ ವಲಯದ ಬಹುತೇಕ ಉತ್ಪನ್ನ ಗಳಿಗೆ ಅಮೆರಿಕ ಈಗ ವಿಧಿಸುತ್ತಿರುವ ಆಮದು ಸುಂಕ ಶೇ 50ರಷ್ಟು ಇದ್ದು, ಅದು ಶೇ 18ಕ್ಕೆ ಇಳಿಕೆ ಆಗಲಿದೆ.

Comments


bottom of page