top of page

ಮೆಟ್ರೊ ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಕೇಂದ್ರವಲ್ಲ: DCM

Writer: new waves technology
new waves technology
Feb 9
1 min read

ಬೆಂಗಳೂರು: ಮೆಟ್ರೊ ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಕಾರ್ಯಾಚರಣೆ ಹಾಗೂ ನಿರ್ವಹಣಾ ವೆಚ್ಚ, ಗ್ರಾಹಕ ಬೆಲೆ ಸೂಚ್ಯಂಕದನ್ವಯ ಈಗಿರುವ ದರ, ಇಂಧನ ವೆಚ್ಚ ಮುಂತಾವುಗಳನ್ನು ಪರಿಗಣನೆಗೆ ತೆಗೆದುಕೊಂಡು ಬಿಎಂಆರ್‌ಸಿಎಲ್ ದರ ಏರಿಕೆ ಮಾಡುತ್ತದೆ. ಪರಿಷ್ಕೃತ ದರದೊಂದಿಗೆ ಬನ್ನಿ ಎಂದು ನಾನು ಅವರಿಗೆ ಸೂಚಿಸಿದ್ದೇನೆ' ಎಂದು ಅವರು ಹೇಳಿದರು.

'ದೆಹಲಿಯಲ್ಲಿ ಭದ್ರತೆ ಹಾಗೂ ಇನ್ನಿತರ ವಿಷಯಗಳನ್ನು ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ. ಅದರ ವೆಚ್ಚ ಅಧಿಕ. ಹೀಗಾಗಿ ದರವನ್ನು ಮತ್ತೊಮ್ಮೆಲೆಕ್ಕ ಹಾಕಿ ಎಂದು ತಿಳಿಸಿದ್ದೇನೆ' ಎಂದರು.

'ಪ್ರಯಾಣ ದರ ಏರಿಕೆ ಸ್ಥಗಿತಗೊಳಿಸಿದ್ದು ರಾಜ್ಯ ಸರ್ಕಾರ, ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಏನೂ ಇಲ್ಲ. ನಿಯಮಗಳ ಅನ್ವಯ ದರ ನಿಗದಿ ಸಮಿತಿ ಎಲ್ಲಾ ಖರ್ಚು ಹಾಗೂ ಇತರ ವಿಷಯಗಳನ್ನು ಪರಿಗಣಿಸಿ ದರ ಏರಿಕೆ ಮಾಡುತ್ತದೆ' ಎಂದು ತಿಳಿಸಿದರು.

Comments


bottom of page