ಮೈಸೂರು: ಏಳು ಕಡೆ ಲೋಕಾಯುಕ್ತ ಪೊಲೀಸರ ದಾಳಿ
Feb 5
1 min read

ಮೈಸೂರು: ಪಾಲಿಕೆಯ ಕಿರಿಯ ಎಂಜಿನಿಯರ್ ಕೆ.ಆರ್.ಚಂದ್ರ ಶೇಖರ್ ಹಾಗೂ ಎಲೆಕ್ಟಿಕಲ್ ಇನ್‌ಸ್ಪೆಕ್ಟರ್ ಅಲ್ತಾಫ್ ಜಪ್ಪಾರ್ಪಿ ಅವರ ಕಚೇರಿ ಹಾಗೂ ಮನೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇಬ್ಬರು ಅಧಿಕಾರಿಗಳ ಕಚೇರಿ, ಮನೆ ಸಹಿತ ಏಳು ಕಡೆ ದಾಳಿ ನಡೆಸಿದ್ದಾರೆ. ವಿಜಯನಗರ ಮೊದಲ ಹಾಗೂ ಎರಡನೇ ಹಂತದಲ್ಲಿ ಆರು ಕಡೆ ಹಾಗೂ ತಿ.ನರಸೀಪುರದಲ್ಲಿ ಒಂದು ಕಡೆ ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆದಿದೆ.





Comments