top of page

ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್‌ ಒಪ್ಪಂದ

Writer: new waves technology
new waves technology
Jan 20
1 min read

ನವದೆಹಲಿ: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಿದ್ದಾರೆ.ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಯುಎಇ ಅಧ್ಯಕ್ಷರನ್ನು 'ಸಹೋದರ' ಎಂದು ಸಂಬೋಧಿಸಿದ್ದಾರೆ.

ಮಾತುಕತೆಯಲ್ಲಿ ಭಾರತ ಹಾಗೂ ಯುಎಇ ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ವಿಕೃತವಾದ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ಭಾರತ ಮತ್ತು ಯುಎಇ 2032ರವರೆಗೆ ಪ್ರತಿ ವರ್ಷ ಸುಮಾರು ₹18.17 ಲಕ್ಷ ಕೋಟಿ (200 ಬಿಲಿಯನ್ ಅಮೆರಿಕನ್ ಡಾಲರ್) ವ್ಯಾಪಾರ ನಡೆಸುವ ಗುರಿ ಹೊಂದಿದೆ.

ಇದರಲ್ಲಿ ಕಾರ್ಯತಂತ್ರದ ಬೃಹತ್ ರಕ್ಷಣಾ ಯೋಜನೆಯ ಜೊತೆಗೆ ದ್ರವೀಕೃತ ನೈಸರ್ಗಿಕ ಅನಿಲ (ಎನ್‌ಎನ್‌ಜಿ) ಒಪ್ಪಂದಕ್ಕೆ ಸಹಿ ಹಾಕಲಾಯಿತು.

ದೆಹಲಿ ವಿಮಾನ ನಿಲ್ದಾಣದಲ್ಲಿ ಯುಎಇ ಅಧ್ಯಕ್ಷರನ್ನು ಪ್ರಧಾನಿ ನರೇಂದ್ರ ಮೋದಿ ಬರಮಾಡಿಕೊಂಡರು. ಅವರೊಂದಿಗೆ ತಾಯಿ ಶೇಖ್ ಫಾತಿಮಾ ಬಿಂತ್ ಮುಬಾರಕ್ ಅಲ್ ಕೆತ್ತಿ ಅವರೂ ಆಗಮಿಸಿದ್ದರು. ಬಳಿಕ ಪ್ರಧಾನಿ ನಿವಾಸಕ್ಕೆ ಕರೆದೊಯ್ದು ಸತ್ಕರಿಸಿದರು. ಫಾತಿಮಾ ಅವರಿಗೆ ಕಾಶ್ಮೀರದ ಪಶ್ಮೀನಾ ಸಾಲನ್ನು ಮತ್ತು ಕಾಶ್ಮೀರ ಕಣಿವೆಯಲ್ಲಿ ಬೆಳೆದ ಕೇಸರಿಯನ್ನು ತೆಲಂಗಾಣದಲ್ಲಿ ತಯಾರಿಸಿದ ಬೆಳ್ಳಿ ಬಾಕ್ಸ್‌ಗಳಲ್ಲಿ ಇರಿಸಿ ಪ್ರಧಾನಿ ಮೋದಿ ಉಡುಗೊರೆ ನೀಡಿದರು.

ಪಾಕಿಸ್ತಾನ-ಸೌದಿ ಅರೇಬಿಯಾ ರಕ್ಷಣಾ ಒಪ್ಪಂದದ ನಾಲ್ಕು ತಿಂಗಳ ಬಳಿಕ ಭಾರತ-ಯುಎಇ ಕಾರ್ಯತಂತ್ರದ ರಕ್ಷಣಾ ಪಾಲುದಾರಿಕೆಗೆ ಸಹಿ ಹಾಕಿರುವುದು ಗಮನಾರ್ಹವೆನಿಸಿದೆ.

Comments


bottom of page