top of page

ವಿಲಾಸಿ, ವಿವಾದ, ವಿದಾಯ: ಕಾನ್ಸಿಡೆಂಟ್ ಗ್ರೂಪ್‌ನ ಸಿ.ಜೆ.ರಾಯ್ ಸಂಕೀರ್ಣ ಬದುಕು

  • Writer: new waves technology
    new waves technology
  • 4 days ago
  • 1 min read

ಬೆಂಗಳೂರು: ಸಾವಿರಾರು ಕೋಟಿಯ ಒಡೆಯನಾಗಿ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಕಾನ್ಸಿಡೆಂಟ್ ಗ್ರೂಪ್‌ನ ಸಿ.ಜೆ. ರಾಯ್ ಅವರ ಸಾವು ಆಘಾತ ಸೃಷ್ಟಿಸಿದೆ. ಅದ್ಭುತ ಯಶಸ್ಸು, ನಿರಂತರ ವಿವಾದಗಳು ಹಾಗೂ ತಮ್ಮ ಸಾರ್ವಜನಿಕ ಗುರುತನ್ನು ಮರಳಿ ಪಡೆಯಲು ಅವರು ಮಾಡುತ್ತಿದ್ದ ಇನ್ನಿಲ್ಲದ ಪ್ರಯತ್ನಗಳು ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ರಾಯ್ ಅವರ ಬೇರು ಕರ್ನಾಟಕದ್ದೇ ಆದರೂ, ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಿಸ್ತರಿಸಿ ರಿಯಲ್ ಎಸ್ಟೇಟ್‌ನಲ್ಲೇ ಹೆಸರು ಮಾಡಿದವರು.

ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ, ತುಮಕೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗದ ನಂತರ ಸಣ್ಣದೊಂದು ಎಲೆಕ್ಟ್ರಾನಿಕ್ ಕಂಪನಿಯ ಉತ್ಪನ್ನಗಳನ್ನು ಮಾರುವ ಸೇಲ್ಸ್‌ಮನ್ ಆಗಿ ವೃತ್ತಿ ಬದುಕು ಆರಂಭಿಸಿದ ರಾಯ್, ಮಹತ್ವಾಕಾಂಕ್ಷಿ.

ಕ್ರಿಸ್ಟಲ್ ಸಮೂಹದ ಮೂಲಕ ರಿಯಲ್ ಎಸ್ಟೇಟ್‌ಗೆ ಕಾಲಿಟ್ಟ ರಾಯ್, ಅಲ್ಲಿನ ವ್ಯವಸ್ಥಾಪಕ ನಿರ್ದೇಶಕಿ ಲತಾ ನಂಬೂದರಿ ಅವರೊಂದಿಗೆ ಕೆಲಸ ಮಾಡಿದವರು. 2005ರಲ್ಲಿ ತಮ್ಮದೇ ಆದ ಕಾನ್ಸಿಡೆಂಟ್ ಗ್ರೂಪ್ ಆರಂಭಿಸಿದರು.

'ಬೇನಾಮಿ ಆಸ್ತಿಗಳು ಮತ್ತು ವಂಚನೆ ಅವರ ಸಮೂಹ ವಿಸ್ತರಣೆಗೆ ಹಾದಿ ಮಾಡಿಕೊಟ್ಟಿದ್ದವು ಎನ್ನುವುದು ಕಾನ್ಸಿಡೆಂಟ್ ಸಮೂಹದೊಳಗಿರುವವರ ಮಾತು. ಇವುಗಳಿಂದ ದೂರ ಉಳಿಯಲು ರಾಯ್ ಅವರು ನಿರಂತರ ಪ್ರಯತ್ನ ನಡೆಸಿದ್ದರು ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ ಎಂದು ಡೆಕ್ಕನ್‌ ಹೆರಾಲ್ಡ್ ವರದಿ ಮಾಡಿದೆ.

Comments


bottom of page