ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ಕಾಡಿನಲ್ಲಿ ನಡೆದು ಮೃತಪಟ್ಟ ತುಂಬು ಗರ್ಭಿಣಿ!
- new waves technology
- Jan 3
- 1 min read

ಗಡ್‌ಚಿರೋಲಿ: ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ದೇಶದ ಕೆಲ ಹಳ್ಳಿಗಳು ಈಗಲೂ ರಸ್ತೆ ಸಂಪರ್ಕ, ವೈದ್ಯಕೀಯ ಸೇವೆಗಳಿಂದ ವಂಚಿತವಾಗಿವೆ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ವರದಿ ತಿಳಿಸಿದೆ.ತೆರಿಗೆ ವಸೂಲಿಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯದ ಗಡ್‌ಚಿರೋಲಿ ಜಿಲ್ಲೆಯಿಂದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಮುಖ್ಯ ರಸ್ತೆಗೆ ಸಂಪರ್ಕ ಕಡಿತಗೊಂಡಿರುವ ಮತ್ತು ವೈದ್ಯಕೀಯ ಸೌಲಭ್ಯವಿಲ್ಲದ ಗ್ರಾಮವೊಂದರ ತುಂಬು ಗರ್ಭಿಣೆಯೊಬ್ಬರು ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ನಡೆದು ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಗಡ್‌ಚಿರೋಲಿ ಜಿಲ್ಲೆಯ ಎಟಪಲ್ಲಿ ತಾಲೂಕಿನ ಆಲ್ಬಂಡಿ ಟೋಲಾ ಗ್ರಾಮದ 24 ವರ್ಷದ ಆಶಾ ಸಂತೋಷ್ ಕಿರಂಗಾ ಮೃತ ಮಹಿಳೆ. ಆಕೆಗೆ 9 ತಿಂಗಳು ತುಂಬಿತ್ತು ಎಂದು ಅವರು ಹೇಳಿದ್ದಾರೆ.
'ಆಕೆಯ ಊರಾದ ಅಲ್ಬಂಡಿ ಟೋಲಾಗೆ ಮುಖ್ಯ ರಸ್ತೆಯಿಂದ ಸಂಪರ್ಕ ಕಡಿತಗೊಂಡಿದೆ. ಅಲ್ಲಿ ಹೆರಿಗೆಗೆ ಯಾವುದೇ ಸೌಲಭ್ಯಗಳು ಲಭ್ಯವಿಲ್ಲ. ಹಾಗಾಗಿ, ಸಹಾಯಕ್ಕಾಗಿ ಆಶಿಸುತ್ತಾ ಜನವರಿ 1ರಂದು ಪತಿಯೊಂದಿಗೆ ಪೆಥಾದಲ್ಲಿರುವ ಸಹೋದರಿಯ ಮನೆಗೆ ಕಾಡಿನ ಹಾದಿಯಲ್ಲಿ 6 ಕಿ. ಮೀ ನಡೆದು ಸಾಗಿದ್ದರು. ಆದರೆ, ತುಂಬು ಗರ್ಭಿಣಿಯಾಗಿದ್ದರಿಂದ ದೀರ್ಘ ನಡಿಗೆಯ ಆಯಾಸ ಸಹಿಸಲಾಗಲಿಲ್ಲ' ಎಂದು ಅವರು ಹೇಳಿದ್ದಾರೆ.










Comments