top of page

BREAKING : ಕ್ಯಾನ್ಸರ್ ನಿಂದ 'ಹಮ್ ಆಪ್ಕೆ ಹೈ ಕೌನ್' ಖ್ಯಾತಿಯ ಗಾಯಕಿ `ಶಾರದಾ ಸಿನ್ಹಾ' ನಿಧನ!

  • Writer: new waves technology
    new waves technology
  • Nov 6, 2024
  • 1 min read

ನವದೆಹಲಿ: ಪದ್ಮಭೂಷಣ ಪುರಸ್ಕೃತ, 'ಹಮ್ ಆಪ್ಕೆ ಹೈ ಕೌನ್' ಖ್ಯಾತಿಯ ಗಾಯಕಿ `ಶಾರದಾ ಸಿನ್ಹಾ' (72) ಅವರು ಕ್ಯಾನ್ಸರ್ ನಿಂದ ನಿಧನರಾಗಿದ್ದಾರೆ. ಅವರು ಮೈಲೋಮಾ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದರು ಮತ್ತು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುದ್ದರು.


ree










ಅವರ ಸ್ಥಿತಿ ಹದಗೆಟ್ಟಿದ್ದರಿಂದ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. 2017 ರಿಂದ, ಅವರು ಮೈಲೋಮಾ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಶಾರದ ಸಿನ್ಹಾ ಅವರು ನವೆಂಬರ್ 1, 1952 ರಂದು ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ಜನಿಸಿದರು. ಅವರು 'ಕಾರ್ತಿಕ್ ಮಾಸ್ ಇಜೋರಿಯಾ', ಕೋಯಲ್ ಬಿನ್' ಮುಂತಾದ ಜಾನಪದ ಹಾಡುಗಳೊಂದಿಗೆ ಅಪಾರ ಅಭಿಮಾನಿಗಳನ್ನು ಗಳಿಸಿದರು.

ಅವರು ಗ್ಯಾಂಗ್ಸ್ ಆಫ್ ವಸ್ಸೀಪರ್-2, ಬಬಲ್, ಹಮ್ ಆಪ್ಕೆ ಹೈ ಕೌನ್ ಮುಂತಾದ ಬಾಲಿವುಡ್ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ. ಅವರು ಛಾತ್ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳಿಗೆ ಪ್ರಸಿದ್ಧರಾಗಿದ್ದಾರೆ. ಬಿಹಾರದ ಕೋಗಿಲೆ ಎಂದೇ ಖ್ಯಾತರಾಗಿರುವ ಶಾರದ ಸಿನ್ಹಾ ಅವರು 1991ರಲ್ಲಿ ಪದ್ಮಶ್ರೀ ಹಾಗೂ 2018ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಆಕೆಯ ಪತಿ ಬ್ರಜ್ ಕಿಶೋರ್ ಸಿನ್ಹಾ ಒಂದು ವಾರದ ಹಿಂದೆ ಮೆದುಳು ಹಾನಿಯಿಂದ ಕೊನೆಯುಸಿರೆಳೆದರು. ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಶಾರದಾ ಸಿನ್ಹಾ ಅವರ ನಿಧನಕ್ಕೆ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.

Comments


bottom of page