Indian Stock Market: ವಾರದ ಮೊದಲ ದಿನವೇ Sensex, ನಿಫ್ಟಿ ಕುಸಿತ; ಅಮೆರಿಕ ಫೆಡರಲ್ ಬ್ಯಾಂಕ್ ನಿರ್ಣಯದ ನಿರೀಕ್ಷೆ!
- new waves technology
- Dec 17, 2024
- 1 min read
ಸೋಮವಾರ ಭಾರತೀಯ ಷೇರುಮಾರುಕಟ್ಟೆ ಇಳಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.0.40ರಷ್ಟು ಕುಸಿತ ದಾಖಲಿಸಿದೆ.

ಮುಂಬೈ: ಭಾರತೀಯ ಷೇರುಮಾರುಕಟ್ಟೆ ವಾರದ ಮೊದಲ ದಿನವಾದ ಸೋಮವಾರ ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದ್ದು, ಅಮೆರಿಕ ಫೆಡರಲ್ ಬ್ಯಾಂಕ್ ನಿರ್ಣಯದ ಕುರಿತು ನಿರೀಕ್ಷೆ ಮುಂದುವರೆದಿದೆ.
ಹೌದು.. ಸೋಮವಾರ ಭಾರತೀಯ ಷೇರುಮಾರುಕಟ್ಟೆ ಇಳಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದ್ದು, ಇಂದಿನ ವಹಿವಾಟಿನಲ್ಲಿ ಭಾರತೀಯ ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಶೇ.0.47ರಷ್ಟು ಇಳಿಕೆ ಕಂಡಿದ್ದರೆ, ನಿಫ್ಟಿ ಶೇ.0.40ರಷ್ಟು ಕುಸಿತ ದಾಖಲಿಸಿದೆ.
ಸೆನ್ಸೆಕ್ಸ್ ಇಂದು 384.55 ಅಂಕಗಳ ಇಳಿಕೆಯೊಂದಿಗೆ 81,748.57 ಅಂಕಗಳಿಗೆ ಕುಸಿದಿದ್ದು, ನಿಫ್ಟಿ 100.05 ಅಂಕಗಳ ಇಳಿಕೆಯೊಂದಿಗೆ 24,668.25 ಅಂಕಗಳಿಗೆ ಇಳಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
ದೂರವಿರುವುದು ತುಂಬಾ ಸುಲಭ'; ವಾರಕ್ಕೆ 70 ಗಂಟೆ ದುಡಿಮೆ ಬಗ್ಗೆ ಮತ್ತೆ ಹೇಳಿಕೆ
ಇಂದಿನ ವಹಿವಾಟಿನಲ್ಲಿ ಮೆಟಲ್, ತಂತ್ರಜ್ಞಾನ ಮತ್ತು ಎಫ್ ಎಂಸಿಜಿ ವಿಭಾಗದ ಷೇರುಗಳ ಮೌಲ್ಯ ಕುಸಿತವಾಗಿದ್ದು, ಫಾರ್ಮಾ ಷೇರುಗಳ ಮೌಲ್ಯ ಏರಿಕೆಯಾಗಿದೆ.
ಅಮೆರಿಕ ಫೆಡರಲ್ ಬ್ಯಾಂಕ್ ನಿರ್ಣಯದ ನಿರೀಕ್ಷೆ!
ಇದೇ ವಾರ ಆಮೆರಿಕ ಫೆಡರಲ್ ಬ್ಯಾಂಕ್ ಮಹತ್ವದ ಸಭೆ ನಡೆಸುತ್ತಿದ್ದು, ಈ ಸಭೆಯಲ್ಲಿ ಕೈಗೊಳ್ಳಲಾಗುವ ನಿರ್ಣಯಗಳ ಕುರಿತು ಮಾರುಕಟ್ಟೆಯಲ್ಲಿ ನಿರೀಕ್ಷೆ ಹೆಚ್ಚಿದೆ. ಇದೇ ಕಾರಣಕ್ಕೆ ಹೂಡಿಕೆದಾರರು ಕಾದುನೋಡುವ ತಂತ್ರದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಯಾರಿಗೆ ಲಾಭ? ಯಾರಿಗೆ ನಷ್ಟ?
ಇಂದಿನ ವಹಿವಾಟಿನಲ್ಲಿ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಲಿಮಿಟೆಡ್, ಇಂಡಸ್ಇಂಡ್ ಬ್ಯಾಂಕ್ ಲಿಮಿಟೆಡ್, ಎಚ್‌ಡಿಎಫ್‌ಸಿ ಜೀವ ವಿಮಾ ಕಂಪನಿ ಸಂಸ್ಥೆಯ ಷೇರುಗಳು ಲಾಭಾಂಶ ಕಂಡಿದ್ದು, ಟೈಟಾನ್ ಕಂಪನಿ, ಅದಾನಿ ಪೋರ್ಟ್ಸ್, ಟಿಸಿಎಸ್ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸಿವೆ.
Comments