top of page

Nobel Peace Prize ಗೆ ಡೊನಾಲ್ಡ್ ಟ್ರಂಪ್ ನಾಮ ನಿರ್ದೇಶನ: ಬೆಂಜಮಿನ್ ನೆತನ್ಯಾಹು

  • Writer: new waves technology
    new waves technology
  • Jul 8
  • 1 min read

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ದೇಶಗಳ ಮಧ್ಯೆ ಶಾಂತಿ ನೆಲೆಸಲು ಸಹಕರಿಸುತ್ತಿದ್ದಾರೆ ಎಂದು ನೆತನ್ಯಾಹು ಅವರು ನಿನ್ನೆ ಸೋಮವಾರ ಅಮೆರಿಕದ ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಭೋಜನಕೂಟದಲ್ಲಿ ಭಾಗವಹಿಸಿದ ನಂತರ ಹೇಳಿದ್ದಾರೆ.

ree

ವಾಷಿಂಗ್ಟನ್: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವುದಾಗಿ ಘೋಷಿಸಿದ್ದು, ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ಟ್ರಂಪ್ ಅವರಿಗೆ ನೀಡಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ದೇಶಗಳ ಮಧ್ಯೆ ಶಾಂತಿ ನೆಲೆಸಲು ಸಹಕರಿಸುತ್ತಿದ್ದಾರೆ ಎಂದು ನೆತನ್ಯಾಹು ಅವರು ನಿನ್ನೆ ಸೋಮವಾರ ಅಮೆರಿಕದ ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ಭೋಜನಕೂಟದಲ್ಲಿ ಭಾಗವಹಿಸಿದ ನಂತರ ಹೇಳಿದ್ದಾರೆ.

ಟ್ರಂಪ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಹಲವು ಬೆಂಬಲಿಗರು ಮತ್ತು ನಿಷ್ಠಾವಂತ ಶಾಸಕರು ನೊಬೆಲ್ ಶಾಂತಿ ಪ್ರಶಸ್ತಿ ನೀಡಬೇಕೆಂದು ನಾಮನಿರ್ದೇಶನಗಳನ್ನು, ಶಿಫಾರಸುಗಳನ್ನು ಮಾಡಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿ ತಮಗಿನ್ನೂ ಸಿಕ್ಕಿಲ್ಲ ಎಂಬ ಬೇಸರ ಟ್ರಂಪ್ ಅವರಿಗಿದೆ. ಅದನ್ನು ಹಲವು ಸಂದರ್ಭಗಳಲ್ಲಿ ತೋರಿಸಿಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಹಾಗೂ ಸೆರ್ಬಿಯಾ ಮತ್ತು ಕೊಸೊವೊ ದೇಶಗಳ ನಡುವಿನ ಸಂಘರ್ಷಗಳನ್ನು ನಿಲ್ಲಿಸುವಲ್ಲಿ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಅವರೇ ಅನೇಕ ಸಂದರ್ಭಗಳಲ್ಲಿ ಹೇಳಿಕೊಂಡದ್ದಿದೆ. ಆದರೆ ನಾರ್ವೆ ಮೂಲದ ನೊಬೆಲ್ ಸಮಿತಿ ಅವರನ್ನು ಪ್ರಶಸ್ತಿಗೆ ಪರಿಗಣಿಸದೆ ಕಡೆಗಣಿಸಿದೆ ಎಂಬ ಅಸಮಾಧಾನ ಅವರಿಗಿದೆ.

ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆ ಶಾಂತಿಯನ್ನು ಕಾಪಾಡುವುದು, ಇಸ್ರೇಲ್ ಮತ್ತು ಹಲವಾರು ಅರಬ್ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವ ಗುರಿಯನ್ನು ಹೊಂದಿರುವ ಒಪ್ಪಂದಗಳ ಸರಣಿಯಾದ ಅಬ್ರಹಾಂ ಒಪ್ಪಂದಗಳಿಗೆ ಮಧ್ಯವರ್ತಿಯಾಗಿ ತಾನು ಕೆಲಸ ಮಾಡಿದ್ದು, ನೊಬೆಲ್ ಶಾಂತಿ ಪುರಸ್ಕಾರಕ್ಕೆ ಅರ್ಹನಾಗಿದ್ದೇನೆ ಎಂಬುದು ಅವರ ವಾದವಾಗಿದೆ.

ಅಮೆರಿಕ ಅಧ್ಯಕ್ಷ ಚುನಾವಣೆ ಪ್ರಚಾರದ ವೇಳೆ ಶಾಂತಿಸ್ಥಾಪಕ ಎಂದು ಹೇಳಿಕೊಂಡು ಬಂದಿದ್ದರು. ಉಕ್ರೇನ್ ಮತ್ತು ಗಾಜಾದಲ್ಲಿನ ಯುದ್ಧಗಳನ್ನು ತ್ವರಿತವಾಗಿ ನಿಲ್ಲಿಸುವಲ್ಲಿ ತಮ್ಮ ಮಾತುಕತೆ ಕೌಶಲ್ಯ ಸಹಾಯಕ್ಕೆ ಬಂದಿದೆ ಎಂದು ಹೇಳಿಕೊಂಡಿದ್ದಾರೆ. ಆದರೂ ಉಕ್ರೇನ್-ಗಾಜಾ ಕದನ ಉಲ್ಭಣಗೊಂಡಿದೆ.

Comments


bottom of page