Shreyas Iyer ಟೀಂ ಇಂಡಿಯಾ ಕಮ್ ಬ್ಯಾಕ್ ಕನಸು ಮತ್ತಷ್ಟು ದೂರ; Duleep Trophy Semi-Final ಪಂದ್ಯ..? ಆಗಿದ್ದೇನು?
- new waves technology
- Sep 5
- 1 min read
Updated: Sep 7
ದುಲೀಪ್ ಟ್ರೋಫಿ 2025 ರ ಮೊದಲ ಸೆಮಿಫೈನಲ್ ನಲ್ಲಿನ ಶ್ರೇಯರ್ ಹೀನಾಯ ಪ್ರದರ್ಶನ ಅವರನ್ನು ಭಾರತ ತಂಡದಿಂದ ಮತ್ತಷ್ಟು ದೂರ ಮಾಡುವ ಅಪಾಯವಿದೆ. ಸೆಮೀಸ್ ನಲ್ಲಿ ಪಶ್ಚಿಮ ವಲಯವು ಕೇಂದ್ರ ವಲಯದ ವಿರುದ್ಧ ಪೈಪೋಟಿ ನಡೆಸಿತು.

ನವದೆಹಲಿ: ಭಾರತ ತಂಡಕ್ಕೆ ಕಮ್ ಬ್ಯಾಕ್ ಮಾಡಬೇಕು ಎನ್ನುವ ಶ್ರೇಯಸ್ ಅಯ್ಯರ್ (Shreyas Iyer) ಕನಸು ಮತ್ತೆ ದೂರಾಗುವ ಅಪಾಯ ಎದುರಾಗಿದ್ದು Duleep Trophy Semi-Final ಪಂದ್ಯದಲ್ಲಿನ ಹೀನಾಯ ಪ್ರದರ್ಶನ ಕಾರಣ ಎನ್ನಲಾಗಿದೆ.
ಹೌದು... ಇದೇ ಸೆಪ್ಟೆಂಬರ್ 4, ಗುರುವಾರ, ದುಲೀಪ್ ಟ್ರೋಫಿ 2025 ರ ಮೊದಲ ಸೆಮಿಫೈನಲ್ ನಲ್ಲಿನ ಶ್ರೇಯರ್ ಹೀನಾಯ ಪ್ರದರ್ಶನ ಅವರನ್ನು ಭಾರತ ತಂಡದಿಂದ ಮತ್ತಷ್ಟು ದೂರ ಮಾಡುವ ಅಪಾಯವಿದೆ. ಸೆಮೀಸ್ ನಲ್ಲಿ ಪಶ್ಚಿಮ ವಲಯವು ಕೇಂದ್ರ ವಲಯದ ವಿರುದ್ಧ ಪೈಪೋಟಿ ನಡೆಸಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಶ್ಚಿಮ ವಲಯವು ಮೊದಲ ಇನ್ನಿಂಗ್ಸ್ ನಲ್ಲಿ 438 ರನ್ ಗಳಿಗೆ ಆಲೌಟ್ ಆಯಿತು.
ಪಶ್ಚಿಮ ವಲಯದ ಪರ ಯಶಸ್ವಿ ಜೈಸ್ವಾಲ್, ಹಾರ್ವಿಕ್ ದೇಸಾಯಿ ಒಂದಂಕಿ ಮೊತ್ತಕ್ಕೆ ಔಟಾದರೆ, ರುತುರಾಜ್ ಗಾಯಕ್ವಾಡ್ 184 ರನ್ ಕಲೆಹಾಕಿ ತಂಡಕ್ಕೆ ನೆರವಾದರು.
ಆದಕೆ ಮಧ್ಯಮ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ 25 ರನ್ ಗಳಿಗೇ ವಿಕೆಟ್ ಒಪ್ಪಿಸಿ ಮತ್ತೆ ನಿರಾಶೆ ಮೂಡಿಸಿದರು. ನಾಯಕ ಶಾರ್ದುಲ್ ಠಾಕೂರ್ (64 ರನ್) ಮತ್ತು ಟನುಷ್ ಕೊಟಿಯಾನ್ (76 ರನ್) ತಂಡದ ಮೊತ್ತವನ್ನು 400ರ ಗಡಿದಾಟಿಸಿದರು.
Comments