ಊಟ, ತಿಂಡಿ ಸ್ಕಿಪ್ ಮಾಡೋದ್ರಿಂದ ಮತ್ತೂ ದಪ್ಪ ಆಗ್ತಿರಾ; ಹುಷಾರು! ಇಲ್ಲಿದೆ ಕಾರಣ
- new waves technology
- 2 days ago
- 1 min read

ಆಧುನಿಕ ಜೀವನ ಶೈಲಿಯ ಅತಿ ದೊಡ್ಡ ಸಮಸ್ಯೆ ಎಂದರೆ ಬೊಜ್ಜು. ಭಾರತದಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಮೂರು ದಶಕಗಳಲ್ಲಿ ಅರ್ಧ ಭಾರತ ದಡೂತಿಗಳ ದೇಶವಾಗಲಿದೆ ಎನ್ನುತ್ತದೆ ವೆಲ್‌ನೆಸ್ ಕ್ಷೇತ್ರದ ಅಂಕಿ ಅಂಶಗಳು. ಹಾಗಾದರೆ ನಾವು ಭಾರತೀಯರು ಹೀಗೆ ದಿನದಿಂದ ದಿನಕ್ಕೆ ದಪ್ಪಗಾಗುತ್ತಿರುವುದಕ್ಕೆ ಕಾರಣವೇನು? ಯಾವ ಸಂಗತಿಗಳು ನಮ್ಮನ್ನು ಈಪಾಟಿ ದಡೂತಿಗಳನ್ನಾಗಿ ಮಾಡುತ್ತಿದೆ? ಇದಕ್ಕೆ ಪರಿಹಾರವೇನು? ಯಾವ ರೀತಿಯ ಡಯಟಿಂಗ್ ಮಾಡಿದರೆ ನಾವು ತೆಳ್ಳಗಾಗಬಹುದು?
ಇಂದಿನ ಮಧ್ಯವಯಸ್ಕ ಜನಾಂಗದ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಗಳಿವು. ನಿಮಗೆ ಹೇಳಿದರೆ ಅಚ್ಚರಿಯಾಗಬಹುದು, ನಾವು ಇಷ್ಟೆಲ್ಲ ಸರ್ಕಸ್ ಮಾಡಿದರೂ ನಮ್ಮ ದೇಹದ ತೂಕವೇ ಇಳಿಯುತ್ತಿಲ್ಲ ಯಾಕೆ ಗೊತ್ತಾ? ಡಯಟಿಂಗ್‌ನ ಹೆಸರಿನಲ್ಲಿ ನಾವು ಮಾಡುತ್ತಿರುವ ತಪ್ಪು ಉಪವಾಸ ಕ್ರಮವೇ ನಮ್ಮನ್ನು ಇನ್ನಷ್ಟು ದಪ್ಪ ಮಾಡುತ್ತಿದೆ ಎಂದರೆ ನೀವು ನಂಬಬೇಕು!
'ಸಾಧ್ಯವೇ ಇಲ್ಲ ಬಿಡಿ, ಉಪವಾಸ ಮಾಡಿದರೆ, ಕಡಿಮೆ ತಿಂದರೆ ದೇಹ ಸೊರಗುತ್ತದೆ. ಇದೇನು ವಿಚಿತ್ರ? ಉಪವಾಸ ಮಾಡಿದ್ದಕ್ಕೇ ದಪ್ಪ ಆಗ್ತಿರೋದು ಅನ್ತೀರಲ್ಲಾ, ನಿಮಗೆಲ್ಲೋ ಭ್ರಮೆ...' ಬಹುತೇಕರು ಹೀಗೆಯೇ ವಾದ ಮಾಡುತ್ತಾರೆ. ಆದರೆ ಇದು ನೂರಕ್ಕೆ ನೂರು ಸತ್ಯ. ಬಹುತೇಕ ನಮ್ಮ ಬೊಜ್ಜಿನ ಸಮಸ್ಯೆಗೆ ನಾವು ಅನುಸರಿಸುತ್ತಿರುವ ತಪ್ಪು ಡಯಟಿಂಗ್ ಪದ್ಧತಿಯೇ ಕಾರಣ. ಇನ್ನೂ ವಿಶೇಷ ಏನು ಗೊತ್ತಾ? ತುಂಬ ಜನ ನಾವು ತಿಂದಿದ್ದರಿಂದಲೇದಪ್ಪ ಆಗುತ್ತಿದ್ದೇವೆ. ನಾವು ಹೀಗೆ ಮಿತಿ ಮೀರಿ ದಪ್ಪಗಾಗಿರುವುದು ಮತ್ತು ದಪ್ಪಗಾಗುತ್ತಲೇ ಹೊಗುತ್ತಿರುವುದಕ್ಕೆ ಮುಖ್ಯ ಕಾರಣ ನಾವು ತಿನ್ನುತ್ತಿರುವುದು. ಹೀಗಾಗಿ ತಿನ್ನೋದನ್ನು ಕಡಿಮೆ ಮಾಡಿದರೆ, ಅಥವಾ ತಿನ್ನೋದನ್ನೇ ಬಿಟ್ಟುಬಿಟ್ಟರೆ ತೆಳ್ಳಗೆ ಆಗಿ ಬಿಡುತ್ತೇವೆ ಎಂದುಕೊಂಡು ಬಿಟ್ಟಿದ್ದಾರೆ. ಇದು ಶುದ್ಧ ಸುಳ್ಳು, ಮತ್ತು ತೀರಾ ಅವೈಜ್ಞಾನಿಕ. ಹಾಗಾದರೆ ಸತ್ಯ ಏನು? ಈ ಪ್ರಶ್ನೆಗೆ ಉತ್ತರ ಹೇಳೋಕೂ ಮುಂಚೆ ಬೊಜ್ಜಿನ ಬಗ್ಗೆ ನಮ್ಮ ಮನಃಸ್ಥಿತಿ ಹೇಗಿದೆ ಅನ್ನೋದನ್ನು ಸೊಲ್ಪ ನೋಡೋಣ.










Comments