ಬೋಸ್‌ರಿಂದ ಪವಾರ್‌ವರೆಗೆ.. ವೈಮಾನಿಕ ಅವಘಡಗಳಲ್ಲಿ ಮೃತಪಟ್ಟ ಗಣ್ಯರ ಪಟ್ಟಿ
- new waves technology
- 2 days ago
- 1 min read

ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಎನ್‌ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಈ ಮೂಲಕ ವಿಮಾನ, ಹೆಲಿಕಾಪ್ಟರ್ ಅವಘಡಗಳಲ್ಲಿ ಮೃತಪಟ್ಟ ಭಾರತದ ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳ ಪಟ್ಟಿಗೆ ಸೇರಿದ್ದಾರೆ.
1945ರ ಆಗಸ್ಟ್ 18ರಂದು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವಿಗೀಡಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಮೊದಲ ಭಾರತೀಯ ರಾಜಕಾರಣಿ ಎನ್ನಬಹುದು.
2011ರಲ್ಲಿ ಅರುಣಾಚಲ ಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಮತ್ತು 2009ರಲ್ಲಿ ಅವಿಭಜಿತ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೈ,ಎಸ್, ರಾಜಶೇಖರ ರೆಡ್ಡಿ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಹಾಲಿ ಮುಖ್ಯಮಂತ್ರಿಗಳಾಗಿದ್ದಾರೆ.
ಇಂದಿರಾ ಗಾಂಧಿಯ ಕಿರಿಯ ಮಗ, ಕಾಂಗ್ರೆಸ್ ನಾಯಕ ಸಂಜಯ್ ಗಾಂಧಿ. ವರ್ಚಸ್ವಿ ರಾಜಕಾರಣಿ ಮತ್ತು ಕ್ರಿಕೆಟ್ ಆಡಳಿತಾಧಿಕಾರಿ ಮಾಧವರಾವ್ ಸಿಂಧಿಯಾ, ಮಾಜಿ ಲೋಕಸಭಾ ಸ್ಪೀಕರ್ ಜಿ. ಎಂ. ಸಿ ಬಾಲಯೋಗಿ, ಎಸ್. ಮೋಹನ್ ಕುಮಾರಮಂಗಲಂ ಮತ್ತು ಆಗಿನ ರಕ್ಷಣಾ ಖಾತೆ ರಾಜ್ಯ ಸಚಿವ ಎನ್. ವಿ. ಎನ್. ಸೋಮು ವಿಮಾನ ಅಪಘಾತಗಳಲ್ಲಿ ಸಾವಿಗೀಡಾದ ಪ್ರಮುಖ ರಾಜಕಾರಣಿಗಳಾಗಿದ್ದಾರೆ.
1980ರ ಜೂನ್ 23ರಂದು 34 ವರ್ಷದ ಸಂಜಯ್ ಗಾಂಧಿ ಅವರು ಚಲಾಯಿಸುತ್ತಿದ್ದ ಲಘು ವಿಮಾನ ದೆಹಲಿಯ ಸಫರ್‌ಜಂಗ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿತ್ತು. ಡೈವಿಂಗ್ ಮತ್ತು ಲೂಪಿಂಗ್ ಮಾಡುವಾಗ ಸಂಜಯ್ ಗಾಂಧಿ ನಿಯಂತ್ರಣ ಕಳೆದುಕೊಂಡಿದ್ದರು. ವಿಮಾನವು ತೀನ್ ಮೂರ್ತಿ ಹೌಸ್ ಬಳಿ ಅಪಘಾತಕ್ಕೀಡಾಗಿತ್ತು.
ನಾಗರಿಕ ವಿಮಾನಯಾನ ಖಾತೆಯ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಮಾಧವರಾವ್ ಸಿಂಧಿಯಾ ಅವರು 2001ರ ಸೆಪ್ಟೆಂಬರ್ 30ರಂದು ಉತ್ತರ ಪ್ರದೇಶದ ಕಾನ್ಸುರಕ್ಕೆ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಲು ಪ್ರಯಾಣಿಸುತ್ತಿದ್ದಾಗ ಸೆಸ್ನಾ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದರು.
2002ರ ಮಾರ್ಚ್ 3ರಂದು ಆಂಧ್ರ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅವಘಡದಲ್ಲಿ ಅಂದಿನ ಲೋಕಸಭಾ ಅಧ್ಯಕ್ಷರಾಗಿದ್ದ ತೆಲುಗು ದೇಶಂ ಪಕ್ಷದ ನಾಯಕ ಜಿ.ಎಂ.ಸಿ ಬಾಲಯೋಗಿ ಸಾವಿಗೀಡಾಗಿದ್ದರು.
2025ರ ಆಗಸ್ಟ್ 12ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಏರ್ ಇಂಡಿಯಾದ 171 ವಿಮಾನ ಪತನಗೊಂಡು ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ ಮೃತಪಟ್ಟರು.










Comments