top of page

ಏಕದಿನ ವಿಶ್ವಕಪ್‌ನಲ್ಲಿ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ: ಏಕೆ ಗೊತ್ತೇ?

  • Writer: new waves technology
    new waves technology
  • Jan 3
  • 1 min read

ಭಾರತದ ಆತಿಥ್ಯದಲ್ಲೇ 2023ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಗಿದು ಎರಡು ತಿಂಗಳು ಕಳೆಯುವುದರೊಳಗೆ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) 2024ರ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಟೀಂ ಇಂಡಿಯಾ ಅಭಿಮಾನಿಗಳು, ವಿಶ್ವಕಪ್ ಫೈನಲ್ ಸೋಲಿನ ಬೇಸರದಿಂದ ಇನ್ನೂ ಹೊರಬಂದಿರಲಿಲ್ಲ. ಸೋಲಿಗಿಂತಲೂ, ಗೆದ್ದ ತಂಡ ಆಸ್ಟ್ರೇಲಿಯಾದ ಆಟಗಾರ ಮಿಚೇಲ್ ಮಾರ್ಶ್ ಅವರು ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸಿದ್ದು, ಹೆಚ್ಚು ನೋವು ನೀಡಿತ್ತು.

ಕೊಹ್ಲಿಯಂತಹ ಬ್ಯಾಟರ್‌ಗಳು ಬೆನ್ನುಬೆನ್ನಿಗೆ ಶತಕ ಗಳಿಸಬೇಕು. ರೋಹಿತ್ ಶರ್ಮಾ ಅಂಥವರ ಬ್ಯಾಟ್‌ಗಳು ಪ್ರತಿ ಎಸೆತವನ್ನೂ ಸಿಕ್ಸರ್‌ಗೇ ಅಟ್ಟಬೇಕು. ಬೌಲರ್‌ಗಳು ನಿರಂತರವಾಗಿ ವಿಕೆಟ್ ಉದುರಿಸಬೇಕು. ಭಾರತ ತಂಡವಿರುವುದೇ ಗೆಲ್ಲಲಿಕ್ಕೆ ಎಂಬಿತ್ಯಾದಿ ನಿರೀಕ್ಷೆಗಳು ಅಭಿಮಾನಿಗಳಲ್ಲಿವೆ. ಹಾಗಾಗಿ, ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಯಾರಿಗಷ್ಟೇ ಅವಕಾಶ ನೀಡಬೇಕು ಎಂಬ ಚರ್ಚೆ ನಡೆದಿತ್ತು.

ಏಕದಿನ ವಿಶ್ವಕಪ್‌ನಲ್ಲಿ ಆಡಿದ್ದ 11 ಇನಿಂಗ್ಸ್‌ಗಳಲ್ಲಿ 95.62ರ ಸರಾಸರಿಯೊಂದಿಗೆ ದಾಖಲೆಯ 765 ರನ್ ಗಳಿಸಿದ್ದರೂ, 'ಕೊಹ್ಲಿಗೆ ಅವಕಾಶ ನೀಡಬಾರದು. ಅವರ ಬದಲು ಇಶಾನ್ ಕಿಶನ್‌ಗೆ ಸ್ಥಾನ ನೀಡಬೇಕು' ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದರು. ಇನ್ನೂ ಕೆಲವರು ವೆಸ್ಟ್ ಇಂಡೀಸ್ ಮತ್ತು ಯುಎಇ ಆತಿಥ್ಯದಲ್ಲಿ ನಡೆಯುವ ಚುಟುಕು ವಿಶ್ವಕಪ್‌ನಲ್ಲಿ ಕೊಹ್ಲಿ ಯಶಸ್ವಿಯಾಗಲಾರರು. ಪವರ್ ಹಿಟ್ಟರ್ ಅಲ್ಲದ ಕಾರಣ, ನಿಧಾನಗತಿಯ ಪಿಚ್‌ನಲ್ಲಿ ರನ್‌ ಗಳಿಸಲು ಅವರಿಗೆ ಸಾಧ್ಯವಾಗದು ಎಂಬ ಕಾರಣ ನೀಡಿ ವಾದಿಸಿದ್ದರು.

Comments


bottom of page