top of page

ಕುಂಭಮೇಳ ಕಾಲ್ತುಳಿತ: ಡಿಜಿಟಲೀಕರಣ ಹೇಳಿಕೆ ಹೊರತಾಗಿಯೂ ಸಾವಿನ ನಿಖರ ಸಂಖ್ಯೆ ಏಕೆ ಇಲ್ಲ?

  • Writer: new waves technology
    new waves technology
  • Feb 11
  • 1 min read

ಉತ್ತರ ಪ್ರದೇಶ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಕನ್ನೌಜ್ ಸಂಸದ, "ಡಬಲ್ ಎಂಜಿನ್ ಸರ್ಕಾರ ಡಬಲ್ ಪ್ರಮಾದಗಳನ್ನು ಮಾಡುತ್ತಿದೆ" ಎಂದರು.

ree

ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಮಹಾ ಕುಂಭದಲ್ಲಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಂಗಳವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಮತ್ತು ಡಿಜಿಟಲೀಕರಣದ ಬಗ್ಗೆ ಸಾಕಷ್ಟು ಜಾಹೀರಾತು ನೀಡಲಾಗಿದ್ದರೂ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಬಗ್ಗೆ ನಿಖರ ಅಂಕಿ ಅಂಶಗಳು ಏಕೆ ಹೊರಬರುತ್ತಿಲ್ಲ ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಕನ್ನೌಜ್ ಸಂಸದ, "ಡಬಲ್ ಎಂಜಿನ್ ಸರ್ಕಾರ ಡಬಲ್ ಪ್ರಮಾದಗಳನ್ನು ಮಾಡುತ್ತಿದೆ" ಎಂದರು.

"ಮೊದಲ ಬಾರಿಗೆ, ಕುಂಭದಲ್ಲಿ ಭಕ್ತರು 300 ಕಿ.ಮೀ ಉದ್ದದ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯಗಳ ಗಡಿಗಳನ್ನು ಬಂದ್ ಮಾಡಲಾಗಿದೆ... ಇದು 'ವಿಕ್ಷಿತ ಭಾರತ'ದ ಚಿತ್ರಣ. ಅಲ್ಲಿ ಸರ್ಕಾರಕ್ಕೆ ವಾಹನ ಸಂಚಾರವನ್ನು ನಿರ್ವಹಿಸಲು ಸಹ ಸಾಧ್ಯವಾಗುತ್ತಿಲ್ಲ. ಭೂಮಿಯ ಮೇಲಿನ ಸಮಸ್ಯೆಗಳನ್ನು ನಾವು ಪರಿಹರಿಸಲು ಸಾಧ್ಯವಾಗದಿದ್ದಾಗ ಚಂದ್ರನ ಮೇಲೆ ಹೋಗುವುದರ ಅರ್ಥವೇನು" ಎಂದು ಮಾಜಿ ಸಿಎಂ ಪ್ರಶ್ನಿಸಿದರು.


"ಆ ಡ್ರೋನ್‌ಗಳು ಈಗ ಎಲ್ಲಿವೆ ಎಂದು ನಾನು ಕೇಳಲು ಬಯಸುತ್ತೇನೆ?... ಡಿಜಿಟಲೀಕರಣದ ಬಗ್ಗೆ ಸಂಪೂರ್ಣ ಜಾಹೀರಾತು... ಈಗಲೂ ಅವರಿಗೆ ಮಹಾ ಕುಂಭದಲ್ಲಿ ಸಾವನ್ನಪ್ಪಿದ ಅಥವಾ ಕಳೆದುಹೋದವರ ಅಂಕಿಅಂಶಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ" ಎಂದು ಯಾದವ್ ಟೀಕಿಸಿದರು.

"ಉತ್ತರ ಪ್ರದೇಶದಲ್ಲಿ ಅವರು ಡಬಲ್ ಎಂಜಿನ್ ಸರ್ಕಾರವನ್ನು ಹೊಂದಿದ್ದಾರೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಡಬಲ್ ಎಂಜಿನ್ ಸರ್ಕಾರ ಡಬಲ್ ಪ್ರಮಾದಗಳನ್ನು ಮಾಡುತ್ತಿದೆ" ಎಂದರು.

ಪ್ರತಿ 12 ವರ್ಷಗಳಿಗೊಮ್ಮೆ ಆಯೋಜಿಸಲಾಗುವ ಈ ಬೃಹತ್ ಧಾರ್ಮಿಕ ಕಾರ್ಯಕ್ರಮವು ಪ್ರಯಾಗ್‌ರಾಜ್‌ನಲ್ಲಿ ಜನವರಿ 13 ರಿಂದ 45 ದಿನಗಳವರೆಗೆ ನಡೆಯುತ್ತಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಫೆಬ್ರವರಿ 9 ರವರೆಗೆ 44 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.

Comments


bottom of page