ನಿರ್ಮಾಣ ಹಂತದ ಸೇತುವೆಯಿಂದ ಕಾರು ಉರುಳಿ ಮೂವರ ಸಾವು: Google Maps ತನಿಖೆ!
- new waves technology
- Nov 27, 2024
- 1 min read
ಭಾನುವಾರ ಮುಂಜಾನೆ ಉತ್ತರ ಪ್ರದೇಶದ ಮದುವೆಗೆ ತೆರಳುತ್ತಿದ್ದ ಯುವಕರಿದ್ದ ಕಾರು ರಾಮಗಂಗಾ ನದಿಗೆ ಉರುಳಿಬಿದ್ದಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಕಾರು ಚಲಾಯಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ಮಂಗಳವಾರ ಹೇಳಿದೆ.

ನವದೆಹಲಿ: ಗೂಗಲ್ ಮ್ಯಾಪ್ ನೋಡಿಕೊಂಡು ಪ್ರಯಾಣಿಸುವಾಗ ನಿರ್ಮಾಣ ಹಂತದ ಸೇತುವೆಯಿಂದ ಕಾರು ಕೆಳಗೆ ಬಿದ್ದು, ಮೂವರು ಯುವಕರು ಸಾವನ್ನಪ್ಪಿದ್ದ ಪ್ರಕರಣದ ತನಿಖೆಗೆ ಸಹಕಾರ ನೀಡುವುದಾಗಿ ಗೂಗಲ್ ಮಂಗಳವಾರ ಹೇಳಿದೆ.
ಭಾನುವಾರ ಮುಂಜಾನೆ ಉತ್ತರ ಪ್ರದೇಶದ ಮದುವೆಗೆ ತೆರಳುತ್ತಿದ್ದ ಯುವಕರಿದ್ದ ಕಾರು ರಾಮಗಂಗಾ ನದಿಗೆ ಉರುಳಿಬಿದ್ದಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದೆ.
ನ್ಯಾವಿಗೇಷನ್ ಆ್ಯಪ್ ನ ಹೆಸರಿಸದ ಅಧಿಕಾರಿ ಮತ್ತು ಸರ್ಕಾರಿ ಲೋಕೋಪಯೋಗಿ ಇಲಾಖೆಯ ಇತರರನ್ನು ಪೊಲೀಸರು ಪ್ರಶ್ನಿಸಿದ್ದಾರೆ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮೃತರ ಕುಟುಂಬದವರಿಗೆ Google ಸಂತಾಪ ಸೂಚಿಸಿದ್ದು, ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಘಟನೆ ಕುರಿತ ತನಿಖೆಗೆ ನಮ್ಮ ಬೆಂಬಲ ನೀಡಲಾಗುವುದು ಎಂದು ಅದರ ವಕ್ತಾರರು ಇಮೇಲ್ ಹೇಳಿಕೆಯಲ್ಲಿ AFP ಗೆ ತಿಳಿಸಿದ್ದಾರೆ.
ಕಳೆದ ವರ್ಷ ಪ್ರವಾಹದಲ್ಲಿ ಸೇತುವೆಯ ಒಂದು ಭಾಗ ಹಾನಿಗೊಳಗಾಗಿತ್ತು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇತ್ತೀಚಿಗೆ ಕೇರಳದಲ್ಲಿ ಕೇರಳದಲ್ಲಿ ಗೂಗಲ್ ಮ್ಯಾಪ್ ನೋಡಿಕೊಂಡು ಕಾರು ಚಲಾಯಿಸಿಕೊಂಡು ಹೋಗಿ ಪೆರಿಯಾರ್ ನದಿಯಲ್ಲಿ ಬಿದ್ದು ಇಬ್ಬರು ವೈದ್ಯರು ಮೃತಪಟ್ಟಿದ್ದರು. ಇದೀಗ ಬಿಹಾರದಲ್ಲಿಯೂ ಗೂಗಲ್ ಮ್ಯಾಪ್ ಎಡವಟ್ಟಿನಿಂದ ಅಂತಹುದೇ ಮತ್ತೊಂದು ದುರ್ಘಟನೆ ಸಂಭವಿಸಿದೆ.










Comments