ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಠಾಕ್ರೆ ಭದ್ರಕೋಟೆ ಭೇದಿಸಿದ ಬಿಜೆಪಿ
- new waves technology
- Jan 17
- 1 min read

ಮುಂಬೈ: ದೇಶದ ಗಮನ ಸೆಳೆದಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ, ಅವಿಭಜಿತ ಶಿವಸೇನಾ ಈ ಪಾಲಿಕೆಯಲ್ಲಿ ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಹೊಂದಿದ್ದ ಪ್ರಾಬಲ್ಯವನ್ನು ಛಿದ್ರಗೊಳಿಸಿದೆ.
ಬಿಎಂಸಿಯಲ್ಲಿ ತನ್ನ ಮೇಯರ್ ಹೊಂದಬೇಕು ಎಂಬ ಬಿಜೆಪಿಯ ದೀರ್ಘಕಾಲದ ಕನಸು ನನಸಾಗುವ ಗಳಿಗೆ ಕೂಡಿಬಂದಂತಾಗಿದೆ. ಇದಕ್ಕೆ ಮಿತ್ರಪಕ್ಷವಾದ ಶಿವಸೇನಾ (ಶಿಂದೆ ಬಣ) ಸಾಥ್ ನೀಡಿದೆ.
ಬಿಎಂಸಿಯ ಒಟ್ಟು ಸದಸ್ಯ ಬಲ 227. ಬಿಜೆಪಿ ಹಾಗೂ ಶಿವಸೇನಾ (ಶಿಂದೆ ಬಣ) ಒಳಗೊಂಡ ಮೈತ್ರಿಕೂಟವು ಸರಳ ಬಹುಮತ ಪಡೆಯುವತ್ತ ಹೆಜ್ಜೆ ಇಟ್ಟಿದ್ದು, ಈ ಮೂಲಕ ದೇಶದ ಅತ್ಯಂತ ಶ್ರೀಮಂತ ನಗರ ಸ್ಥಳೀಯ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. 2025-26ನೇ ಸಾಲಿನ ಬಿಎಂಸಿ ಬಜೆಟ್ ಗಾತ್ರ ₹74,427 ಕೋಟಿ ಆಗಿದೆ.
ಬಿಎಂಸಿ ಹಾಗೂ ಇತರ 28 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಶುಕ್ರವಾರ ನಡೆಯಿತು.

ಎನ್‌ಸಿಪಿಯ ಭದ್ರಕೋಟೆ ಎಂದೇ ಕರೆಯಲಾಗುತ್ತಿದ್ದ ಪುಣೆಯಲ್ಲಿ ಕೂಡ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಚುನಾವಣೆಗೂ ಮುನ್ನ ಎನ್‌ಸಿಪಿಯ ಎರಡೂ ಬಣಗಳು (ಅಜಿತ್ ಪವಾರ್ ಹಾಗೂ ಶರದ್ ಪವಾರ್ ಬಣ) ಮೈತ್ರಿ ಮಾಡಿಕೊಂಡಿದ್ದವು. ಆ ಮೈತ್ರಿಯನ್ನೂ ಮಣಿಸುವ ಮೂಲಕ ಕೇಸರಿ ಪಕ್ಷ ವಿಜಯದ ನಗೆ ಬೀರಿದೆ.










Comments