top of page

ರೈತರಿಗೆ ಶೇ 50ರಷ್ಟು ಸಬ್ಸಿಡಿಯಲ್ಲಿ ಟ್ರ್ಯಾಕ್ಟ‌ರ್: ಅರ್ಜಿ ಸಲ್ಲಿಕೆ ಹೇಗೆ?

  • Writer: new waves technology
    new waves technology
  • 5 days ago
  • 1 min read

ದೇಶದ ರೈತರು ಅಧುನಿಕ ತಂತ್ರಜ್ಞಾನವನ್ನು ಬಳಸುವ ಮೂಲಕ ಸ್ವಾವಲಂಬಿಗಳಾಗಬೇಕು ಎಂಬುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯಾಗಿದೆ. ಆದ್ದರಿಂದಲೇ ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ.

ಸ್ವಂತ ಟ್ರ್ಯಾಕ್ಟ‌ರ್ ಇರಬೇಕು ಎಂಬುದು ಪ್ರತಿಯೊಬ್ಬ ರೈತನ ಕನಸಾಗಿದೆ. ಆದರೆ, ಆ ಕನಸನ್ನು ನನಸಾಗಿಸುವುದಕ್ಕೆ ಹಣ ಹೇಗೆ ಹೊಂದಿಸಬೇಕು ಎಂಬುದು ಹಲವರಿಗೆ ಚಿಂತೆಯಾಗಿದೆ. ಆದರೆ, ಇನ್ನು ಮೇಲೆ ಆ ಚಿಂತೆ ಬೇಡ. ನಿಮ್ಮ ಟ್ರ್ಯಾಕ್ಟ‌ರ್ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವೇ ಸಹಾಯ ಮಾಡುತ್ತದೆ. ಟ್ರ್ಯಾಕ್ಟರ್ ಖರೀದಿಸುವುದಕ್ಕೆ ಬರೋಬರಿ ಶೇಕಡ 50ರಷ್ಟು ಸಬ್ಸಿಡಿ (ಸಹಾಯಧನ ನೀಡುತ್ತಿದೆ. ಅಂದರೆ ₹10 ಲಕ್ಷದ ಟ್ರ್ಯಾಕ್ಟರ್ ನಿಮಗೆ ಕೇವಲ ₹5 ಲಕ್ಷಕ್ಕೆ ಸಿಗುತ್ತದೆ.

ಹೌದು, ಈ ಯೋಜನೆಯ ಹೆಸರೇ ಕಿಸಾನ್‌ ಟ್ರ್ಯಾಕ್ಟರ್ ಯೋಜನೆ. ರೈತರ ಕೆಲಸವನ್ನು ಸುಲಭ ಮಾಡುವುದಕ್ಕೆ ಮತ್ತು ರೈತರ ಮೇಲಿನ ಸಾಲದ ಹೊರೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರ್ಕಾರವು 'ಕಿಸಾನ್ ಟ್ರಾಕ್ಟರ್ ಯೋಜನೆ'ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಟ್ರಾಕ್ಟರ್ ಖರೀದಿಸಲು ಹಣಕಾಸಿನ ನೆರವು ಒದಗಿಸುತ್ತಿದೆ. ಎಲ್ಲ ವರ್ಗದ ರೈತರು ಈ ಯೋಜನೆಯ ಲಾಭ ಪಡೆಯಬಹುದು.

ಏನಿದು ಕಿಸಾನ್ ಟ್ರ್ಯಾಕ್ಟರ್ ಯೋಜನೆ...

ಕಿಸಾನ್ ಟ್ರ್ಯಾಕ್ಟ‌ರ್ ಯೋಜನೆಯು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒಂದು ಪ್ರಮುಖ ಯೋಜನೆಯಾಗಿದ್ದು, ರೈತರಿಗೆ ಆಧುನಿಕ ಕೃಷಿ ಉಪಕರಣಗಳನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ. ಕೃಷಿ ಯಾಂತ್ರೀಕರಣದ ಉಪ-ಮಿಷನ್‌ (ಎಸ್‌ಎಂಎಎಂ) ಅಡಿಯಲ್ಲಿ 'ಕಿಸಾನ್ ಟ್ರ್ಯಾಕ್ಟರ್‌ ಯೋಜನೆ'ಯನ್ನು ಜಾರಿ ಮಾಡಲಾಗಿದ್ದು, ಇದೊಂದು ಉಪ ಯೋಜನೆಯಾಗಿದೆ.

ಈ ಯೋಜನೆಯಡಿ ಟ್ರ್ಯಾಕ್ಟ‌ರ್ ಮತ್ತು ಇತರ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸರ್ಕಾರವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಅರ್ಹ ರೈತರು ಹೊಸ ಟ್ರ್ಯಾಕ್ಟರ್ ಅನ್ನು ಆನ್‌ರೋಡ್ ಬೆಲೆಯ ಮೇಲೆ ಶೇಕಡ 50ರಷ್ಟು ಸಬ್ಸಿಡಿ ಪಡೆಯಬಹುದು. ಈ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿ, ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಯಾಂತ್ರಿಕೃತ ಉಪಕರಣಗಳ ಬಳಕೆಯನ್ನು ಉತ್ತೇಜಿಸುತ್ತದೆ.

Comments


bottom of page