ಹತ್ತಿಪ್ಪತ್ತು ಶಾಸಕರನ್ನು ಕಟ್ಕೊಂಡು CM ಆಗೋಕಾಗುತ್ತಾ?: ಡಿಕೆಶಿಗೆ GT ದೇವೇಗೌಡ ಟಾಂಗ್!
- new waves technology
- Feb 20
- 1 min read
ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಅದೃಷ್ಟವಂತ ಮನುಷ್ಯ, ಅವರಂತಹ ಅದೃಷ್ಟ ಯಾರಿಗೂ ಬರುವುದಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರು: ಜೆಡಿಎಸ್ ಪಕ್ಷದ ಶಾಸಕ ಮತ್ತು ಹಿರಿಯ ರಾಜಕಾರಣಿ ಜಿಟಿ ದೇವೇಗೌಡ ಈಗ ಕಾಂಗ್ರೆಸ್ ಮುಖಂಡನಂತೆ ಮಾತಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಅದೃಷ್ಟವಂತ ಮನುಷ್ಯ, ಅವರಂತಹ ಅದೃಷ್ಟ ಯಾರಿಗೂ ಬರುವುದಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ GT ದೇವೇಗೌಡ, ಮುಖ್ಯಮಂತ್ರಿ ಬದಲಾವಣೆ ಎನ್ನುವ ವಿಚಾರವನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ಮುಖ್ಯಮಂತ್ರಿ ಬದಲಾವಣೆ ಆಗಲು ಶಾಸಕರ ಬಲ ಬೇಡವೇ" ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಆ ಮೂಲಕ, ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ದ ಮಾತನಾಡಿದ್ದಾರೆ.
ಬರೀ ಸಿಎಂ ಬದಲಾವಣೆ ಎಂದು ಹೇಳಿಕೆ ನೀಡುತ್ತಿದ್ದರೆ ಆಗುವುದಿಲ್ಲ. ಜನರಿಗೂ ಈ ಮಾತನ್ನು ಕೇಳಿಕೇಳಿ ಬೇಸರವಾಗಿ ಹೋಗಿದೆ. ಮುಖ್ಯಮಂತ್ರಿಯಾಗಲು ಹತ್ತಿಪ್ಪತ್ತು ಶಾಸಕರ ಬೆಂಬಲವಿದ್ದರೆ ಸಾಲುವುದಿಲ್ಲ, ಮುಖ್ಯಮಂತ್ರಿಯಾಗಲು ಎಲ್ಲ 138 ಕಾಂಗ್ರೆಸ್ ಶಾಸಕರ ಬೆಂಬಲ ಬೇಕು ಎಂದು ಜಿ.ಟಿ.ದೇವೇಗೌಡ ಹೇಳಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಚರ್ಚೆ ಬೆನ್ನಲ್ಲೇ ಜಿ.ಟಿ.ದೇವೇಗೌಡರ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮುಂದೊಂದು ದಿನ ಡಿಕೆ ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗೋದು ನಿಶ್ಚಿತ, ಅದನ್ನು ಮನಸ್ಸಿನಲ್ಲಿಟ್ಟುಕೊಂಡೇ ಅವರು ಕೆಲಸ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಹೇಗೆ ಶಿವಕುಮಾರ್ ಬೆಂಬಲ ನೀಡಿದ್ದರೋ ಸಿದ್ದರಾಮಯ್ಯ ಸಹ ಆ ಋಣವನ್ನು ತೀರಿಸಲಿದ್ದಾರೆ ಎಂದು ದೇವೇಗೌಡ ಹೇಳಿದರು. ಹತ್ತಿಪ್ಪತ್ತು ಶಾಸಕರನ್ನು ಕಟ್ಟಿಕೊಂಡು ಸಿಎಂ ಅಗೋದು ಸಾಧ್ಯವಿಲ್ಲ ಅಂತ ಅವರು ಶಿವಕುಮಾರ್ ಕುರಿತು ಹೇಳಿದಂತಿತ್ತು.
Comments