Amul Milk Price -ಅಮುಲ್ ಹಾಲಿನ ದರ ಏರಿಕೆ: ನೂತನ ಬೆಲೆ ಇಂದು ಜಾರಿ
- new waves technology
- May 1
- 1 min read
ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್ಗಳಿಗೆ ದರ ಏರಿಕೆ ಅನ್ವಯವಾಗಲಿದೆ.

ನವದೆಹಲಿ: ನಂದಿನಿ ಹಾಲಿನ ದರ ಹೆಚ್ಚಳ ಹಾಗೂ ಮದರ್ ಡೈರಿ ಹಾಲಿನ ದರವನ್ನು 2 ರೂಪಾಯಿ ಹೆಚ್ಚಳ ಮಾಡಿದ ಬೆನ್ನಲ್ಲೇ ದೇಶದ ಮತ್ತೊಂದು ಜನಪ್ರಿಯ ಡೈರಿ ಬ್ರಾಂಡ್ ಅಮುಲ್ ಹಾಲಿನ ದರ ಮೇ 1ರಂದು ಎರಡು ರೂಪಾಯಿ ಹೆಚ್ಚಳವಾಗಿದೆ. ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬರುತ್ತಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (GCMMF) ತಿಳಿಸಿದೆ.
ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್ಗಳಿಗೆ ದರ ಏರಿಕೆ ಅನ್ವಯವಾಗಲಿದೆ.
ಕಳೆದ ವರ್ಷವಷ್ಟೇ ಗ್ರಾಹಕರಿಗೆ ರಿಲೀಫ್ ನೀಡಲು ಅಮುಲ್ ಸುಮಾರು ಐದು ತಿಂಗಳ ಕಾಲ 1 ಲೀಟರ್ ಮತ್ತು 2 ಲೀಟರ್ ಹಾಲಿನ ಪ್ಯಾಕ್‌ಗಳಲ್ಲಿ ಕ್ರಮವಾಗಿ 50 ಮಿಲಿ ಮತ್ತು 100 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ನೀಡಿತ್ತು. ಕಳೆದ ಜನವರಿಯಲ್ಲಿ, 1 ಲೀಟರ್ ಪ್ಯಾಕ್‌ನ ಬೆಲೆಯನ್ನು 1 ರೂ. ಕಡಿಮೆ ಮಾಡಿತ್ತು.
ಆದರೆ ಇದೀಗ ದರ ಏರಿಕೆ ಮಾಡುವ ಮೂಲಕ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ತಿಂಗಳ ಆರಂಭದಲ್ಲಿ ಶಾಕ್ ನೀಡಿದೆ.
Comments