top of page

COVID-19: ದೇಶದಲ್ಲಿ ಇಂದು864 ಮಂದಿಗೆ ಪಾಸಿಟವ್; ಸಕ್ರಿಯ ಪ್ರಕರಣಗಳ ಸಂಖ್ಯೆ 4,302ಕ್ಕೆ ಏರಿಕೆ

  • Writer: new waves technology
    new waves technology
  • Jun 5
  • 1 min read

ಹೆಚ್ಚಿನ ಕೋವಿಡ್ ಪ್ರಕರಣಗಳು ಸೌಮ್ಯವಾಗಿದ್ದು, ಅವುಗಳನ್ನು ಮನೆಯ ಆರೈಕೆಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ree

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೋನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 864 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸಕ್ರಿಯ COVID-19 ಪ್ರಕರಣಗಳ ಸಂಖ್ಯೆ 4,302ಕ್ಕೆ ಏರಿಕೆಯಾಗಿದೆ.

ಹೆಚ್ಚಿನ ಕೋವಿಡ್ ಪ್ರಕರಣಗಳು ಸೌಮ್ಯವಾಗಿದ್ದು, ಅವುಗಳನ್ನು ಮನೆಯ ಆರೈಕೆಯಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಜನವರಿ 1, 2025 ರಿಂದ ಇದುವರೆಗೆ ಒಟ್ಟು 44 ಸಾವುಗಳು ವರದಿಯಾಗಿದ್ದು, ಇವರಲ್ಲಿ ಬಹುತೇಕರು ಇತರ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು" ಎಂದು ಮೂಲಗಳು ತಿಳಿಸಿವೆ.

ದೇಶಾದ್ಯಂತ ಪ್ರಕರಣಗಳು ಹೆಚ್ಚುತ್ತಿರುವಂತೆ, ಪ್ರಸ್ತುತ COVID-19 ಪರಿಸ್ಥಿತಿ ಮತ್ತು ಸನ್ನದ್ಧತಾ ಕ್ರಮಗಳನ್ನು ನಿರ್ಣಯಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಆರೋಗ್ಯ ಸೇವೆಗಳ ಮಹಾನಿರ್ದೇಶಕಿ(DGHS) ಡಾ. ಸುನೀತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ತಾಂತ್ರಿಕ ಪರಿಶೀಲನಾ ಸಭೆ ನಡೆಸಿದೆ.

"ಕೇಂದ್ರ ಆರೋಗ್ಯ ಸಚಿವಾಲಯವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರೆಸಿದೆ ಮತ್ತು ಪರಿಣಾಮಕಾರಿ ಸಂವಹನದ ಮೂಲಕ ಸಾರ್ವಜನಿಕ ಆರೋಗ್ಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ" ಎಂದು ಮೂಲಗಳು ತಿಳಿಸಿವೆ.

ರಾಜ್ಯವಾರು COVID-19 ಪ್ರಕರಣಗಳು

ಗುಜರಾತ್: 461 ಪ್ರಕರಣ, 1 ಸಾವು

ದೆಹಲಿ: 457 ಪ್ರಕರಣ, 4 ಸಾವು

ಪಶ್ಚಿಮ ಬಂಗಾಳ: 432 ಪ್ರಕರಣ, 1 ಸಾವು

ಕರ್ನಾಟಕ: 324 ಪ್ರಕರಣ, 4 ಸಾವು

ತಮಿಳುನಾಡು: 216 ಪ್ರಕರಣ, 4 ಸಾವು

ಉತ್ತರ ಪ್ರದೇಶ: 201 ಪ್ರಕರಣ, 2 ಸಾವು

Comments


bottom of page