ಭಾರತೀಯ ವಿದ್ಯಾರ್ಥಿಯ ಗಡೀಪಾರು ಮಾಡುವ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ತಡೆ: ಅಮೆರಿಕ ಫೆಡರಲ್ ನ್ಯಾಯಾಧೀಶರ ಆದೇಶ
- new waves technology
- Apr 16
- 1 min read
ಕ್ರಿಶ್ ಲಾಲ್ ಇಸೆರ್ದಾಸನಿ 2021 ರಿಂದ ಎಫ್-1 ವಿದ್ಯಾರ್ಥಿ ವೀಸಾದೊಂದಿಗೆ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆಯುತ್ತಿದ್ದಾರೆ.

ನ್ಯೂಯಾರ್ಕ್: ವಿದ್ಯಾರ್ಥಿ ವೀಸಾ ರದ್ದುಗೊಂಡ 21 ವರ್ಷದ ಭಾರತೀಯ ಪದವಿ ವಿದ್ಯಾರ್ಥಿಯನ್ನು ಗಡೀಪಾರು ಮಾಡದಂತೆ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಅಮೆರಿಕದ ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕ ತಡೆ ನೀಡಿದ್ದಾರೆ.
ಕ್ರಿಶ್ ಲಾಲ್ ಇಸೆರ್ದಾಸನಿ 2021 ರಿಂದ ಎಫ್-1 ವಿದ್ಯಾರ್ಥಿ ವೀಸಾದೊಂದಿಗೆ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆಯುತ್ತಿದ್ದಾರೆ.
ಪೂರ್ಣ ಸಮಯದ ದಾಖಲಾತಿ ಮತ್ತು ಉತ್ತಮ ಶೈಕ್ಷಣಿಕ ಸ್ಥಿತಿಯನ್ನು ಕಾಯ್ದುಕೊಂಡಿರುವ ಇಸ್ಸೆರ್ದಾಸನಿ ಈಗ ತಮ್ಮ ಕೊನೆಯ ಪದವಿ ವರ್ಷದ ಅಂತಿಮ ಸೆಮಿಸ್ಟರ್‌ನಲ್ಲಿದ್ದು, ಮೇ 10ರಂದು ನಿರೀಕ್ಷಿತ ಪದವಿ ಪಡೆಯುವವರೆಗೆ 30 ದಿನಗಳಿಗಿಂತ ಕಡಿಮೆ ಸಮಯ ಉಳಿದಿದೆ ಎಂಬ ಮಾಹಿತಿ ಅವರ ದಾಖಲೆಗಳಿಂದ ಮಾಧ್ಯಮಗಳಿಗೆ ಲಭ್ಯವಾಗಿದೆ.
ವಿಸ್ಕಾನ್ಸಿನ್‌ನ ಪಶ್ಚಿಮ ಜಿಲ್ಲೆಯ ಯುಎಸ್ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಲಾದ ದಾಖಲೆಗಳಲ್ಲಿ, ಇಸೆರ್ದಾಸನಿ ಅವರು ನವೆಂಬರ್ 22, 2024 ರಂದು ಬಾರ್‌ನಿಂದ ತಡರಾತ್ರಿ ಮನೆಗೆ ನಡೆದುಕೊಂಡು ಹೋಗುವಾಗ ಮತ್ತೊಂದು ಗುಂಪಿನೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿದ್ದ ವೇಳೆ ಅವರನ್ನು ಬಂಧಿಸಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳುತ್ತವೆ.
ಇಸ್ಸೆರ್ದಾಸನಿಯನ್ನು ಅನುಚಿತ ವರ್ತನೆಗಾಗಿ ಬಂಧಿಸಲಾಗಿದ್ದರೂ, ಪ್ರಕರಣವನ್ನು ಪರಿಶೀಲಿಸಿದ ನಂತರ ಜಿಲ್ಲಾ ವಕೀಲರು ಆರೋಪಗಳನ್ನು ಮುಂದುವರಿಸಲು ನಿರಾಕರಿಸಿದರು.
ಆದಾಗ್ಯೂ, ಏಪ್ರಿಲ್ 4ರಂದು ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ವಿದ್ಯಾರ್ಥಿ ಸೇವೆಗಳ (ISS) ಕಚೇರಿಯು ಇಸ್ಸೆರ್ದಾಸನಿಗೆ ಅವರ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ವ್ಯವಸ್ಥೆ (SEVIS) ದಾಖಲೆಯನ್ನು ಕೊನೆಗೊಳಿಸಲಾಗಿದೆ ಎಂದು ಇಮೇಲ್ ಮೂಲಕ ತಿಳಿಸಿದೆ.
ಕ್ರಿಮಿನಲ್ ದಾಖಲೆಗಳ ಪರಿಶೀಲನೆಯಲ್ಲಿ ಗುರುತಿಸಲಾದ ಮತ್ತು ವೀಸಾವನ್ನು ರದ್ದುಗೊಳಿಸಿದ ವ್ಯಕ್ತಿಗಾಗಿ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಯಿಂದ ನಿರ್ವಹಿಸಲ್ಪಡುವ ಯುಎಸ್ ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ಕಾರ್ಯಕ್ರಮವು ಸೆವಿಸ್ ನ್ನು ಕೊನೆಗೊಳಿಸಿದೆ.
ಇಸ್ಸೆರ್ದಾಸನಿ ಅವರ ವೀಸಾವನ್ನು ರದ್ದುಗೊಳಿಸುವ ಬಗ್ಗೆ ಯುಎಸ್ ವಲಸೆ ಮತ್ತು ಕಸ್ಟಮ್ಸ್ ಜಾರಿ, ವಿಶ್ವವಿದ್ಯಾಲಯ ಅಥವಾ ರಾಜ್ಯ ಇಲಾಖೆಯಿಂದ ಯಾವುದೇ ಸಂವಹನವನ್ನು ಸ್ವೀಕರಿಸಿಲ್ಲ ಎಂದು ನ್ಯಾಯಾಲಯದ ಪತ್ರಿಕೆಗಳು ಹೇಳುತ್ತವೆ.
コメント