top of page

ಮುಂಬೈನಲ್ಲಿ ಒಂದು ತಿಂಗಳು ಡ್ರೋನ್‌, ಪ್ಯಾರಾಗ್ಲೈಡರ್‌, ಹಾಟ್ ಏರ್ ಬಲೂನ್‌ ನಿಷೇಧ

  • Writer: new waves technology
    new waves technology
  • Apr 3
  • 1 min read

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ರ ಅಡಿಯಲ್ಲಿ ಹೊರಡಿಸಲಾದ ನಿಷೇಧಾಜ್ಞೆಯು ಏಪ್ರಿಲ್ 4 ರಿಂದ ಮೇ 5 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮುಂಬೈ: ಯಾವುದೇ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಮುಂಬೈ ಪೊಲೀಸರು ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋಲೈಟ್ ವಿಮಾನಗಳು, ಪ್ಯಾರಾ ಗ್ಲೈಡರ್‌ಗಳು ಮತ್ತು ಹಾಟ್ ಏರ್ ಬಲೂನ್‌ ಹಾರಿಸುವುದನ್ನು ಒಂದು ತಿಂಗಳ ಕಾಲ ನಿಷೇಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ರ ಅಡಿಯಲ್ಲಿ ಹೊರಡಿಸಲಾದ ನಿಷೇಧಾಜ್ಞೆಯು ಏಪ್ರಿಲ್ 4 ರಿಂದ ಮೇ 5 ರವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆದೇಶದ ಪ್ರಕಾರ, ಭಯೋತ್ಪಾದಕರು ಮತ್ತು ಸಮಾಜ ವಿರೋಧಿ ಶಕ್ತಿಗಳು ತಮ್ಮ ದಾಳಿಗೆ ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋಲೈಟ್ ವಿಮಾನಗಳು, ಪ್ಯಾರಾ ಗ್ಲೈಡರ್‌ಗಳನ್ನು ಬಳಸಬಹುದು ಮತ್ತು ವಿವಿಐಪಿಗಳನ್ನು ಗುರಿಯಾಗಿಸಬಹುದು ಅಥವಾ ಜನರ ಜೀವಕ್ಕೆ ಅಪಾಯವನ್ನುಂಟುಮಾಡಬಹುದು. ಅಲ್ಲದೆ ಸಾರ್ವಜನಿಕ ಆಸ್ತಿಯನ್ನು ನಾಶಪಡಿಸಬಹುದು. ಈ ಮೂಲಕ ಮುಂಬೈ ಪೊಲೀಸ್ ಕಮಿಷನರೇಟ್ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದು.

ಮುನ್ನೆಚ್ಚರಿಕೆ ಕ್ರಮವಾಗಿ ಹಾರುವ ವಸ್ತುಗಳ ಮೂಲಕ ಸಂಭವನೀಯ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ನಗರದಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಬೇಕಾಗಿದೆ. ಹೀಗಾಗಿ ಡ್ರೋನ್‌ಗಳು, ರಿಮೋಟ್-ನಿಯಂತ್ರಿತ ಮೈಕ್ರೋಲೈಟ್ ವಿಮಾನಗಳು, ಪ್ಯಾರಾ ಗ್ಲೈಡರ್‌ಗಳನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Comments


bottom of page