top of page

SCO ಶೃಂಗಸಭೆ ಬರೀ ನಾಟಕ: 'ಭಾರತ ಕೆಟ್ಟ ರಾಷ್ಟ್ರ' ರಷ್ಯಾದಿಂದ ತೈಲ ಖರೀದಿಯ ಬಗ್ಗೆ ಉರಿದುಬಿದ್ದ ಟ್ರಂಪ್ ಆಪ್ತ!

  • Writer: new waves technology
    new waves technology
  • Sep 2
  • 1 min read

ಇವು ಕೆಟ್ಟ ರಾಷ್ಟ್ರಗಳು. ಭಾರತ ರಷ್ಯಾದ ಯುದ್ಧ ತಂತ್ರಕ್ಕೆ ಉತ್ತೇಜನ ನೀಡುತ್ತಿದ್ದರೆ, ಚೀನಾ ಇಂಧನ ನೀಡುತ್ತಿದೆ. ಈ ಹಂತದಲ್ಲಿ ನಾವು ಮಿತ್ರರಾಷ್ಟ್ರಗಳೊಂದಿಗೆ ಹೆಜ್ಜೆ ಹಾಕುತ್ತಿವೆ ಎಂದರು.

ree



ವಾಷಿಂಗ್ಟನ್: ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಭೆಯಲ್ಲಿ(SCO)ರಷ್ಯಾ- ಚೀನಾ- ಭಾರತ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ಸಭೆ ಯಶಸ್ವಿಯಾಗಿರುವುದು ಅಮೆರಿಕದ ಹೊಟ್ಟೆ ಉರಿಯನ್ನು ಹೆಚ್ಚಿಸಿದೆ.ಈ ಶೃಂಗಸಭೆ ಕುರಿತು ಮಾತನಾಡಿರುವ ಡೊನಾಲ್ಡ್ ಟ್ರಂಪ್ ಅವರ ಆಪ್ತ ಹಾಗೂ ಶ್ವೇತಭವನದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, SCO ಶೃಂಗಸಭೆ ಬರೀ ನಾಟಕ, ಭಾರತ ಒಂದು ಕೆಟ್ಟ ರಾಷ್ಟ್ರವಾಗಿದೆ ಎಂದು ಕಿಡಿಕಾರಿದ್ದು, ರಷ್ಯಾದಿಂದ ಕಚ್ಚಾ ತೈಲ ಖರೀದಿ ಬಗ್ಗೆ ಉರಿದುಬಿದ್ದಿದ್ದಾರೆ.

ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, SCO ಶೃಂಗಸಭೆ ಬರೀ ನಾಟಕವಾಗಿದೆ. ಭಾರತ ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಅವರ ಮೌಲ್ಯಗಳು ರಷ್ಯಾಕ್ಕಿಂತ ನಮ್ಮ ಮತ್ತು ಚೀನಾಕ್ಕೆ ಹೆಚ್ಚು ಹತ್ತಿರವಾಗಿದೆ ಎಂದು ಭಾವಿಸಿದ್ದೇನೆ. ಆದರೆ ನೋಡಿ, ಇವು ಕೆಟ್ಟ ರಾಷ್ಟ್ರಗಳು. ಭಾರತ ರಷ್ಯಾದ ಯುದ್ಧ ತಂತ್ರಕ್ಕೆ ಉತ್ತೇಜನ ನೀಡುತ್ತಿದ್ದರೆ, ಚೀನಾ ಇಂಧನ ನೀಡುತ್ತಿದೆ. ಈ ಹಂತದಲ್ಲಿ ನಾವು ಮಿತ್ರರಾಷ್ಟ್ರಗಳೊಂದಿಗೆ ಹೆಜ್ಜೆ ಹಾಕುತ್ತಿವೆ ಎಂದರು.


ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತನಾಡಿದ ಅವರು, ಯುಎಸ್ ಮತ್ತು ಭಾರತ ಬಲವಾದ ಅಡಿಪಾಯ ಹೊಂದಿದ್ದು, ಎರಡು ಪ್ರಜಾಪ್ರಭುತ್ವ ರಾಷ್ಟ್ರಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಮರ್ಥವಾಗಿವೆ ಎಂದು ಒತ್ತಿ ಹೇಳಿದರು. ಅವರ ಆಶಾವಾದದ ಹೊರತಾಗಿಯೂ ರಷ್ಯಾದೊಂದಿಗಿನ ಭಾರತದ ತೈಲ ಖರೀದಿ ವ್ಯಾಪಾರವನ್ನು ಟೀಕಿಸಿದರು.

ಭಾರತ ರಷ್ಯಾದಿಂದ ರಿಯಾಯಿತಿ ದರದ ಕಚ್ಚಾ ತೈಲ ಆಮಜು ಮತ್ತು ನಂತರದ ಸಂಸ್ಕರಿಸಿದ ಉತ್ಪನ್ನಗಳ ಮರುಮಾರಾಟ - ಉಕ್ರೇನ್‌ನಲ್ಲಿನ ಕ್ರೆಮ್ಲಿನ್ ಯುದ್ಧಕ್ಕೆ ಪರಿಣಾಮಕಾರಿಯಾಗಿ ನೆರವಾಗುತ್ತಿದೆ ಎಂದು ಅವರು ವಾದಿಸಿದರು


ರಷ್ಯಾದ ತೈಲವನ್ನು ಖರೀದಿಸುವ ಮತ್ತು ನಂತರ ಅದನ್ನು ಮರುಮಾರಾಟ ಮಾಡುವ, ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಪ್ರಯತ್ನಗಳಿಗೆ ಹಣಕಾಸು ಒದಗಿಸುವ ವಿಷಯದಲ್ಲಿ ಭಾರತೀಯರು ಉತ್ತಮರಾಗಿಲ್ಲ. ವ್ಯಾಪಾರ ಮಾತುಕತೆಗಳಲ್ಲಿನ ನಿಧಾನಗತಿಯ ಪ್ರಗತಿಯೇ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ವಾಷಿಂಗ್ಟನ್ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.

ಎಲ್ಲಾ ಆಯ್ಕೆಗಳು ನಮ್ಮ ಮುಂದಿವೆ. ಉಕ್ರೇನ್ ಮೇಲೆ ಆಕ್ರಮಣ ಹೆಚ್ಚಿಸುವ ಬಗ್ಗೆ ರಷ್ಯಾದ ವಿರುದ್ಧ ನಿರ್ಬಂಧಗಳನ್ನು ಟ್ರಂಪ್ ಆಡಳಿತ ಪರಿಗಣಿಸುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬೆಸೆಂಟ್ ತಿಳಿಸಿದರು. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶಾಂತಿಯ ಕುರಿತು ಇತ್ತೀಚಿನ ಮಾತುಕತೆಗಳ ಹೊರತಾಗಿಯೂ ದಾಳಿಗಳನ್ನು ಹೆಚ್ಚಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದರು.


Comments


bottom of page