Trump Tariffs Row: ದೊಡ್ಡಣ್ಣನಿಗೆ ಶಾಕ್ ಮೇಲೆ ಶಾಕ್ ಕೊಟ್ಟ ಭಾರತ, ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿಗೆ 'ವಿರಾಮ'!
- new waves technology
- Aug 8
- 1 min read
ಕೇಂದ್ರ ಸರ್ಕಾರವು ಹೊಸ ಅಮೇರಿಕನ್ ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.

ನವದೆಹಲಿ: ಭಾರತದ ಮೇಲೆ ಶೇ.50ರಷ್ಟು ತೆರಿಗೆ ಹೇರುವ ಬೆದರಿಕೆ ಹಾಕಿರುವ ದೊಡ್ಡಣ್ಣ ಅಮೆರಿಕಕ್ಕೆ ಭಾರತ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಈ ಬಾರಿ ಶಸ್ತ್ರಾಸ್ತ್ರ, ಯುದ್ಧ ವಿಮಾನ ಖರೀದಿ ಯೋಜನೆಗೆ ಭಾರತ ತಾತ್ಕಾಲಿಕ ವಿರಾಮ ಹಾಕಿದೆ.
ಹೌದು.. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ರಫ್ತುಗಳ ಮೇಲೆ ವಿಧಿಸಿದ ಸುಂಕಗಳು ದಶಕಗಳಲ್ಲಿಯೇ ಅತ್ಯಂತ ಗರಿಷ್ಟ ಮಟ್ಟಕ್ಕೆ ತಲುಪಿರುವ ಬೆನ್ನಲ್ಲೇ ಭಾರತದ ಅಸಮಾಧಾನದ ಮೊದಲ ಸ್ಪಷ್ಟ ಸಂಕೇತ ಹೊರಬಿದ್ದಿದ್ದು, ಕೇಂದ್ರ ಸರ್ಕಾರವು ಹೊಸ ಅಮೇರಿಕನ್ ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ.
ಈ ವಿಷಯದ ಬಗ್ಗೆ ಪರಿಚಿತವಾಗಿರುವ ಮೂವರು ಭಾರತೀಯ ಅಧಿಕಾರಿಗಳು ದೇಶೀಯ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, 'ಕೇಂದ್ರ ಸರ್ಕಾರವು ಹೊಸ ಅಮೇರಿಕನ್ ಶಸ್ತ್ರಾಸ್ತ್ರಗಳು ಮತ್ತು ವಿಮಾನಗಳನ್ನು ಖರೀದಿಸುವ ಯೋಜನೆಯನ್ನು ಸ್ಥಗಿತಗೊಳಿಸಿದೆ' ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಕೆಲವು ಖರೀದಿಗಳ ಕುರಿತು ಘೋಷಣೆಗಾಗಿ ಭಾರತವು ಮುಂಬರುವ ವಾರಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ವಾಷಿಂಗ್ಟನ್‌ಗೆ ಕಳುಹಿಸಲು ಯೋಜಿಸಿತ್ತು, ಆದರೆ ಆ ಪ್ರವಾಸವನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಆಗಸ್ಟ್ 6 ರಂದು ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ರಷ್ಯಾದ ತೈಲ ಖರೀದಿಗೆ ಶಿಕ್ಷೆಯಾಗಿ ಭಾರತೀಯ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ್ದರು. ಇದರರ್ಥ ದೇಶವು ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಇದು ಭಾರತೀಯ ರಫ್ತಿನ ಮೇಲಿನ ಒಟ್ಟು ಸುಂಕವನ್ನು ಶೇಕಡಾ 50 ಕ್ಕೆ ಏರಿಸಿತು. ಇದು ಯಾವುದೇ ಅಮೇರಿಕನ್ ವ್ಯಾಪಾರ ಪಾಲುದಾರರಲ್ಲಿ ಅತ್ಯಧಿಕ ಎಂದು ಹೇಳಲಾಗಿದೆ.
ಅಮೆರಿಕದೊಂದಿಗೆ ಭಾರತ ಸಕ್ರಿಯ ಮಾತುಕತೆ
ಇನ್ನು ಈ ತೆರಿಗೆ ವಿಚಾರ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಅಮೆರಿಕದೊಂದಿಗೆ ಭಾರತ ಸಕ್ರಿಯ ಮಾತುಕತೆ ನಡೆಸುತ್ತಿದೆ.
ಟ್ರಂಪ್ ಸುಂಕಗಳ ಮೇಲೆ ತಮ್ಮನ್ನು ತಾವು ತ್ವರಿತವಾಗಿ ಹಿಮ್ಮೆಟ್ಟಿಸಿಕೊಂಡ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಭಾರತವು ವಾಷಿಂಗ್ಟನ್‌ನೊಂದಿಗೆ ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದೆ. ಭಾರತವು ಸುಂಕಗಳು ಮತ್ತು ದ್ವಿಪಕ್ಷೀಯ ಸಂಬಂಧಗಳ ದಿಕ್ಕಿನ ಬಗ್ಗೆ ಸ್ಪಷ್ಟತೆಯನ್ನು ಪಡೆದ ಉಭಯ ದೇಶಗಳ ನಡುವಿನ ನಂತರ ರಕ್ಷಣಾ ಖರೀದಿಗಳು ಮುಂದುವರಿಯಬಹುದು ಎಂದು ಮತ್ತೋರ್ವ ಅಧಿಕಾರಿ ಹೇಳಿದ್ದಾರೆ.
ಲಿಖಿತ ಸೂಚನೆ ನೀಡಿಲ್ಲ
ಇನ್ನು ಈ ರಕ್ಷಣಾ ಖರೀದಿಗಳನ್ನು ವಿರಾಮಗೊಳಿಸಲು ಲಿಖಿತ ಸೂಚನೆಗಳನ್ನು ನೀಡಲಾಗಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದು, ತ್ವರಿತವಾಗಿ ನಿರ್ಧಾರ ಹಿಮ್ಮುಖಗೊಳಿಸುವ ಆಯ್ಕೆಯನ್ನು ಭಾರತ ಹೊಂದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಂತೆಯೇ ಹಾಲಿ ಬೆಳವಣಿಗೆಗಳ ಕುರಿತು ಭಾರತದ ರಕ್ಷಣಾ ಸಚಿವಾಲಯ ಮತ್ತು ಪೆಂಟಗನ್ ರಾಯಿಟರ್ಸ್ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿ ತಿಳಿಸಿದೆ.










Comments