top of page

ಆನೇಕಲ್: ರೈತ, ಕಾರ್ಮಿಕ ದೇಶದ ಕಣ್ಣುಗಳು- ಚಂದಾಪುರದಲ್ಲಿ ಸಿಪಿಐಎಂ ಸಮ್ಮೇಳನ

  • Writer: new waves technology
    new waves technology
  • Oct 24, 2024
  • 1 min read

ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಸಿಪಿಐಎಂ ಪಕ್ಷದ ವತಿಯಿಂದ ಚಂದಾಪುರ ಶಾಖಾ ಸಮ್ಮೇಳವನ್ನುದ್ದೇಶಿಸಿ ಸಿಪಿಐಎಂನ ಜಿಲ್ಲಾ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಮಾತನಾಡಿದರು


ree








ಆನೇಕಲ್:ಕಾರ್ಮಿಕರ ಈ ದೇಶದ ಆಸ್ತಿ. ಅನ್ನ ನೀಡುವ ರೈತ ಮತ್ತು ಅಗತ್ಯ ವಸ್ತು ಉತ್ಪಾದಿಸುವ ಕಾರ್ಮಿಕ ಈ ದೇಶದ ಎರಡು ಕಣ್ಣುಗಳಿದ್ದಂತೆ. ಶ್ರಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಡುವ ಅವಶ್ಯಕತೆಯಿದೆ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಿ.ಎನ್‌.ಮಂಜುನಾಥ್‌ ಹೇಳಿದರು.

ತಾಲ್ಲೂಕಿನ ಚಂದಾಪುರದಲ್ಲಿ ಸಿಪಿಐಎಂ ಆಯೋಜಿಸಿದ್ದ ಚಂದಾಪುರ ಶಾಖಾ ಸಮ್ಮೇಳನದಲ್ಲಿ ಮಾತನಾಡಿದರು.

ದುಡಿಯುವ ವರ್ಗಕ್ಕೆ ಹೆಚ್ಚಿನ ಅನುಕೂಲ ಕಲ್ಪಿಸಲು ಪಕ್ಷದಿಂದ ತಾಲ್ಲೂಕಿನ ವಿವಿಧೆಡೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.

ಪಕ್ಷದ ತಾಲ್ಲೂಕು ಕಾರ್ಯದರ್ಶಿ ಡಿ.ಮಹದೇಶ್‌, ಕೇಂದ್ರ ಸರ್ಕಾರ ತನ್ನ ನೀತಿಗಳಿಂದ ಕಾರ್ಮಿಕರಿಗೆ ಒಂದು ರೀತಿಯಾಗಿ ತೊಂದರೆ ನೀಡುತ್ತಿದ್ದಾರೆ. ಸ್ಥಳೀಯ ಆಡಳಿತದಿಂದ ಇತ್ತೀಚಿನ ದಿನಗಳಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿವೆ. ಅಂಗಡಿ ತೆರವುಗೊಳಿಸಿ, ತೊಂದರೆ ನೀಡಲಾಗುತ್ತಿದೆ ಎಂದು ದೂರಿದರು.

ಪಕ್ಷದ ತಾಲ್ಲೂಕು ಕಾರ್ಯದರ್‌ಶಿ ಜಿ.ಪಿ.ಸುನೀಲ್‌, ಮುಖಂಡರಾದ ಸುರೇಶ್, ಸರ್ಪಭೂಷಣ್‌, ರೇಣುಕಾ ಇದ್ದರು.

Comments


bottom of page