top of page

ನಾನು, ಕರಂದ್ಲಾಜೆ ಮುಂದಿನ ನಾಯಕರು: ಬಸನಗೌಡ ಪಾಟೀಲ ಯತ್ನಾಳ್

  • Writer: new waves technology
    new waves technology
  • Nov 5, 2024
  • 1 min read

ವಿಜಯಪುರ: 'ನಾನು ಮತ್ತು ಶೋಭಾ ಕರಂದ್ಲಾಜೆಯೇ ಕರ್ನಾಟಕದ ಮುಂದಿನ ನಾಯಕರು' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.


ree








'ವಿಜಯಪುರದಲ್ಲಿ ಶೋಭಾ ಕರಂದ್ಲಾಜೆ, ಯತ್ನಾಳ ಒಟ್ಟಿಗೆ ಧರಣಿ ಕೂತಿರುವುದು ನಮ್ಮ ಪಕ್ಷದ ಕೆಲವರಿಗೆ ಆಶ್ಚರ್ಯ ಉಂಟುಮಾಡಿದೆ. ನಾವಿಬ್ಬರೇ ಮುಂದಿನ ನಾಯಕರು ಎಂಬುದನ್ನು ಅವರು ಅರಿಯಬೇಕು' ಎಂದು ತಮ್ಮ ವಿರೋಧಿಗಳಿಗೆ ಸಂದೇಶ ನೀಡಿದರು.


ಯತ್ನಾಳ್ ಮತ್ತು ರಮೇಶ ಜಾರಕಿಹೊಳಿ ಗುಂಪು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದು, ಅವರು ಅಧ್ಯಕ್ಷರಾಗಿರುವವರೆಗೂ ಪಕ್ಷದ ಪರ ಪ್ರಚಾರ, ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಪಕ್ಷದ ಅಧ್ಯಕ್ಷರಾದ ಬಳಿಕ ಶೋಭಾ ಅವರು ಒಂದು ಬಾರಿಯೂ ಭೇಟಿ ಮಾಡಿ, ಪಕ್ಷದ ವಿಚಾರವಾಗಿ ಮಾತುಕತೆ ನಡೆಸಿಲ್ಲ. ವಿಜಯೇಂದ್ರ ಜತೆ ಅಂತರ ಕಾಯ್ದುಕೊಂಡಿರುವ ಅವರು ಸೋಮವಾರ, ಯತ್ನಾಳ ಅವರ ಜತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.

Comments


bottom of page