top of page

ಬೆಂಗಳೂರು ಅವಳಿ ಸುರಂಗ ರಸ್ತೆ ಯೋಜನೆ: ರಾಜ್ಯ ಸರ್ಕಾರ-ಸಂಸ್ಥೆಗಳಿಗೆ NGT ನೊಟೀಸ್

  • Writer: new waves technology
    new waves technology
  • Sep 11
  • 1 min read

ಸುರಂಗ ರಸ್ತೆ ಯೋಜನೆಯಲ್ಲಿನ ನ್ಯೂನತೆಗಳ ಬಗ್ಗೆ ಗಮನ ಸೆಳೆಯಲು ಬೆಂಗಳೂರು ಪ್ರಜಾ ವೇದಿಕೆ ಮತ್ತು ಇತರರು ಎರಡು ವಾರಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆಯನ್ನು ನವೆಂಬರ್ 3 ಕ್ಕೆ ಮುಂದೂಡಲಾಗಿದೆ.

h
h

ಬೆಂಗಳೂರು: ಬೆಂಗಳೂರಿನ ಅತ್ಯಂತ ಚರ್ಚಾಸ್ಪದ ಅವಳಿ ಸುರಂಗ ರಸ್ತೆ ಯೋಜನೆಯ ಕುರಿತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ವಿಚಾರಣೆ ಆರಂಭಿಸಿದೆ.

ನಿನ್ನೆ ಬುಧವಾರ ನಡೆದ ಮೊದಲ ವಿಚಾರಣೆಯಲ್ಲಿ, ರಾಜ್ಯ ಸರ್ಕಾರ, ಬಿಬಿಎಂಪಿ (ಈಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ), ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ (SEIAA), B-SMILE, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಯೋಜನಾ ಸಲಹೆಗಾರರಿಗೆ ನೋಟಿಸ್ ಜಾರಿ ಮಾಡುವಂತೆ ಎನ್ ಜಿಟಿ ತೀರ್ಪು ನೀಡಿದೆ.

ಸುರಂಗ ರಸ್ತೆ ಯೋಜನೆಯಲ್ಲಿನ ನ್ಯೂನತೆಗಳ ಬಗ್ಗೆ ಗಮನ ಸೆಳೆಯಲು ಬೆಂಗಳೂರು ಪ್ರಜಾ ವೇದಿಕೆ ಮತ್ತು ಇತರರು ಎರಡು ವಾರಗಳ ಹಿಂದೆ ಅರ್ಜಿ ಸಲ್ಲಿಸಿದ್ದರು. ಮುಂದಿನ ವಿಚಾರಣೆಯನ್ನು ನವೆಂಬರ್ 3 ಕ್ಕೆ ಮುಂದೂಡಲಾಗಿದೆ.

ಅವಳಿ ಸುರಂಗ ರಸ್ತೆ ಯೋಜನೆಯನ್ನು ತರಾತುರಿಯಲ್ಲಿ 2020 ರ ಸಮಗ್ರ ಚಲನಶೀಲತಾ ಯೋಜನೆಯಲ್ಲಿ ಯಾವುದೇ ವಿಶ್ವಾಸಾರ್ಹ ತಾಂತ್ರಿಕ ಮೌಲ್ಯಮಾಪನ ಅಥವಾ ಬೆಂಬಲ ಇಲ್ಲದೆ ಕಳೆದ ಬಜೆಟ್ ನಲ್ಲಿ ಸರ್ಕಾರ ತರಾತುರಿಯಲ್ಲಿ ಘೋಷಿಸಿತು ಎಂದು ಅರ್ಜಿದಾರರು ಎನ್ ಜಿಟಿಗೆ ತಿಳಿಸಿತ್ತು. ಈ ಪ್ರಸ್ತಾವನೆಯು ರಾಜಕೀಯ ಪ್ರೇರಿತವಾಗಿದ್ದು, ಎರಡು ಬಾರಿ ವಿಫಲವಾದ ನಂತರ ಕಾರ್ಯವಿಧಾನದ ಕುಶಲತೆಯ ಮೂಲಕ ಕಾರ್ಯಸಾಧ್ಯತಾ ಅಧ್ಯಯನಕ್ಕೆ ಮರುಹೊಂದಿಸಲಾಯಿತು ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.

ಅರ್ಜಿದಾರರು ಕಳೆದ ಮೇ ತಿಂಗಳಲ್ಲಿ, ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ 16.74 ಕಿ.ಮೀ ಅವಳಿ-ಟ್ಯೂಬ್ ಸುರಂಗ ಮಾರ್ಗವನ್ನು ನಿರ್ಮಿಸಲು ಸಂಪುಟವು ಅನುಮೋದನೆ ನೀಡಿದೆ ಎಂದು ಸಲ್ಲಿಸಿದ್ದಾರೆ, ಇದನ್ನು ಬಿಲ್ಡ್-ಆಪರೇಟ್-ಟ್ರಾನ್ಸ್‌ಫರ್ ಮಾದರಿಯಡಿಯಲ್ಲಿ 19,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ

Comments


bottom of page