top of page

ಬೆಂಗಳೂರು ಶೇ. 8.5 ರಷ್ಟು ಬೆಳವಣಿಗೆಯೊಂದಿಗೆ ಮುಂಬೈ, ದೆಹಲಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತಿದೆ! ಇಲ್ಲಿದೆ ವರದಿ...

  • Writer: new waves technology
    new waves technology
  • Nov 21
  • 1 min read

ಜಾಗತಿಕ ತಂತ್ರಜ್ಞಾನ ದೈತ್ಯರು ಭಾರತದ ಎಐ-ಕ್ವಾಂಟಮ್ ಕಂಪ್ಯೂಟಿಂಗ್ ಹಾಟ್‌ಸ್ಪಾಟ್ ಆಗಲು ಬೆಂಗಳೂರನ್ನು ಏಕೆ ಆಯ್ಕೆ ಮಾಡುತ್ತಿದ್ದಾರೆ ಎಂಬುದನ್ನು ಈ ವರದಿ ಎತ್ತಿ ತೋರಿಸುತ್ತಿದೆ.

ree

ಬೆಂಗಳೂರು: ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬುಧವಾರ ಬಿಡುಗಡೆ ಮಾಡಿದ ಬೆಂಗಳೂರು ನಾವೀನ್ಯತೆ ವರದಿಯಲ್ಲಿ, ಬೆಂಗಳೂರು 2035 ರವರೆಗೆ ವಾರ್ಷಿಕ ಶೇ. 8.5 ರಷ್ಟು ಬೆಳೆವಣಿಗೆ ಸಾಧಿಸುತ್ತಿದೆ ಎಂದು ಹೇಳಲಾಗಿದ್ದು, ಸಿಲಿಕಾನ್ ಸಿಟಿ ಮುಂಬೈ(6.6%) ಮತ್ತು ದೆಹಲಿ(6.5%)ಗಿಂತ ಬಹಳ ಮುಂದಿದೆ.

ಭಾರತದ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ(ಜಿಸಿಸಿ) ಶೇ. 40 ರಷ್ಟು ಬೆಂಗಳೂರಿನಲ್ಲಿ ನೆಲೆಗೊಂಡಿದ್ದು, ಇದು ದೇಶದಲ್ಲಿಯೇ ಅತಿ ಹೆಚ್ಚು, ಮತ್ತು ಇದು 2029ರ ವೇಳೆಗೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

ಜಾಗತಿಕ ತಂತ್ರಜ್ಞಾನ ದೈತ್ಯರು ಭಾರತದ ಎಐ-ಕ್ವಾಂಟಮ್ ಕಂಪ್ಯೂಟಿಂಗ್ ಹಾಟ್‌ಸ್ಪಾಟ್ ಆಗಲು ಬೆಂಗಳೂರನ್ನು ಏಕೆ ಆಯ್ಕೆ ಮಾಡುತ್ತಿದ್ದಾರೆ ಎಂಬುದನ್ನು ಈ ವರದಿ ಎತ್ತಿ ತೋರಿಸುತ್ತಿದೆ.

ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ವೃತ್ತಿಪರರ ಸರಾಸರಿ ವಾರ್ಷಿಕ ವೇತನ 12,000 ಡಾಲರ್ ಆಗಿರುವುದರಿಂದ ಕಾರ್ಪೊರೇಟ್ ವೆಚ್ಚ ಕಡಿಮೆ ಇದೆ. ಇದು ಇತರ ಅಂತರರಾಷ್ಟ್ರೀಯ ನಗರಗಳಿಗಿಂತ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ಜಾಗತಿಕ ತಂತ್ರಜ್ಞಾನ ದೈತ್ಯರು ಬೆಂಗಳೂರನ್ನು ಆಯ್ಕೆ ಮಾಡುತ್ತಿದ್ದಾರೆ.


ಬೆಂಗಳೂರಿನಲ್ಲಿ ಕಚೇರಿ ಸ್ಥಳ ಬಾಡಿಗೆಯ ವೆಚ್ಚವು ಬೀಜಿಂಗ್‌ನಲ್ಲಿನ ಮೂರನೇ ಒಂದು ಭಾಗದಷ್ಟಿದೆ. ಹೆಚ್ಚುವರಿಯಾಗಿ, ಬೆಂಗಳೂರಿನಲ್ಲಿರುವ ಜಿಸಿಸಿ ಪ್ರತಿಭಾನ್ವಿತ ಗುಂಪಿನಲ್ಲಿ ಶೇ, 48 ರಷ್ಟು ಜನ ಎಂಜಿನಿಯರಿಂಗ್, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಉನ್ನತ ಮಟ್ಟದ ಪಾತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಈ ನಗರವು ಅತ್ಯಂತ ಕೈಗೆಟುಕುವ ವಸತಿ ಸೌಲಭ್ಯವನ್ನು ಹೊಂದಿದೆ ಮತ್ತು ಜೀವನ ವೆಚ್ಚದ ದೃಷ್ಟಿಯಿಂದ ಪ್ರಮುಖ ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆಗಳಲ್ಲಿ ಅತ್ಯಂತ ಅಗ್ಗವಾಗಿದೆ.

ಬೆಂಗಳೂರು ಭಾರತದ ತಂತ್ರಜ್ಞಾನ ಪ್ರತಿಭೆಗಳ ಎಂಜಿನ್ ಆಗಿದ್ದು, ಇದು ದೇಶದ ತಂತ್ರಜ್ಞಾನ ಮತ್ತು ಮಾನವ ಬಂಡವಾಳ ಕೇಂದ್ರವಾಗಿದೆ ಎಂದು ವರದಿ ಹೇಳುತ್ತದೆ.

ಬೆಂಗಳೂರಿನಲ್ಲಿ ಮಹಿಳೆಯರು ನೇತೃತ್ವದ ನವೋದ್ಯಮಗಳು ಅಭಿವೃದ್ಧಿ ಹೊಂದಿವೆ. ಬೆಂಗಳೂರಿನಲ್ಲಿ ಮಹಿಳಾ ಉದ್ಯಮಿಗಳು ಸಂಗ್ರಹಿಸಿದ ಒಟ್ಟು ಬಂಡವಾಳ 13.4 ಬಿಲಿಯನ್ ಡಾಲರ್ ಆಗಿದ್ದು, ಇದು ಭಾರತದ ಇತರ ನಗರಗಳಲ್ಲಿಯೇ ಅತ್ಯಧಿಕ ಎಂದು ವರದಿ ಹೇಳುತ್ತದೆ.

Comments


bottom of page