top of page

"ಸಿದ್ದರಾಮಯ್ಯ ಸರ್ಕಾರದ್ದಷ್ಟೇ ಯಾಕೆ? ನಮ್ದೂ ಇರಲಿ ತೊಗೊಳಿ": ಕೇಂದ್ರದಿಂದ LPG ದರ ಏರಿಕೆ!

  • Writer: new waves technology
    new waves technology
  • Apr 7
  • 1 min read

ಎಲ್ಲಾ ರೀತಿಯ ಎಲ್ ಪಿಜಿ ಗ್ರಾಹಕರಿಗೆ ದರ ಏರಿಕೆ ಮಾಡಲಾಗಿದೆ. ಅಡುಗೆ ಅನಿಲ ಅಥವಾ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ree

ನವದೆಹಲಿ: ರಾಜ್ಯ ಸರ್ಕಾರದ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಈಗ ಕೇಂದ್ರ ಸರ್ಕಾರವೂ ಬೆಲೆ ಏರಿಕೆಯ ಬರೆ ಎಳೆದಿದೆ.

ಎಲ್ಲಾ ರೀತಿಯ ಎಲ್ ಪಿಜಿ ಗ್ರಾಹಕರಿಗೆ ದರ ಏರಿಕೆ ಮಾಡಲಾಗಿದೆ. ಅಡುಗೆ ಅನಿಲ ಅಥವಾ ಎಲ್‌ಪಿಜಿ ಬೆಲೆಯನ್ನು ಸಿಲಿಂಡರ್‌ಗೆ 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಬೆಲೆ ಏರಿಕೆ ಸಬ್ಸಿಡಿ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಅನ್ವಯವಾಗಲಿದೆ. "ಉಜ್ವಲ ಅಡಿಯಲ್ಲಿ 14.2 ಕೆಜಿ ಎಲ್‌ಪಿಜಿ ಬೆಲೆ 500 ರಿಂದ 550 ಕ್ಕೆ ಮತ್ತು ಉಜ್ವಲ ಯೋಜನೆಯ ಹೊರತಾದ ಬಳಕೆದಾರರಿಗೆ 803ರಿಂದ 853 ಕ್ಕೆ ಹೆಚ್ಚಾಗಲಿದೆ" ಎಂದು ಪುರಿ ತಿಳಿಸಿದ್ದಾರೆ.

ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿದೆ, ಆದಾಗ್ಯೂ, ಈ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಲಾಗುವುದಿಲ್ಲ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಭರಿಸುತ್ತವೆ. ಇದಕ್ಕೂ ಮುನ್ನ ರಾಜ್ಯ ಸರ್ಕಾರ ಹಾಲು, ವಿದ್ಯುತ್, ಡೀಸೆಲ್, ಬಸ್ ದರ ಏರಿಕೆ ಮಾಡಿತ್ತು.

Comments

bottom of page