top of page

ಸಿಂಧೂ ನದಿಗೆ ಉರುಳಿದ ಬಸ್: 26 ಮಂದಿ ಮೃತ್ಯು

  • Writer: new waves technology
    new waves technology
  • Nov 13, 2024
  • 1 min read

(ನ್ಯೂಸ್ಕಡಬ) newskadaba.comಡೈಮರ್,ನ.13. ಮದುವೆ ಮನೆಯಿಂದ ಜನರನ್ನು ಹೊತ್ತು ಬರುತ್ತಿದ್ದ ಬಸ್ ಸಿಂಧೂ ನದಿಗೆ ಉರುಳಿ ಬಿದ್ದು 26 ಮಂದಿ ಮೃತಪಟ್ಟ ಘಟನೆ ಪಾಕಿಸ್ತಾನದ ಉತ್ತರ ಗಿಲ್ಗಿಟ್-ಬಾಲ್ಟಿಸ್ತಾನ್ (ಜಿಬಿ) ಪ್ರದೇಶದಲ್ಲಿ ಸಂಭವಿಸಿದೆ.


ree










ಬಸ್ 28 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ಡೈಮರ್ ಜಿಲ್ಲೆಯ ಥಾಲಿಚಿ ಪ್ರದೇಶದಲ್ಲಿ ನದಿಗೆ ಉರುಳಿದೆ.

ಸ್ಥಳೀಯರು ಮತ್ತು ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದು, ಇಬ್ಬರ ಜೀವ ಉಳಿಸುವಲ್ಲಿ ಯಶಸ್ವಿಯಾದರು. ಇನ್ನು ಈ ಘಟನೆಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ಸೂಚಿಸಿದ್ದಾರೆ. ಜೊತೆಗೆ ನಾಪತ್ತೆಯಾದವರನ್ನು ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Comments


bottom of page