Bangladeshಗೆ ಆಘಾತ: ಪ್ರವಾಸ ಮುಂದೂಡಿದ Team India, ಲಂಕಾದಲ್ಲಿ ODI, T20 ಸರಣಿ ಕುರಿತು BCCI ಚರ್ಚೆ! ಸರಣಿ ರದ್ದಾಗಿದ್ದೇಕೆ?
- new waves technology
- Jul 9
- 1 min read
ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು BCCI ಮುಂದೂಡಿತ್ತು.

ಮುಂಬೈ: ಆಂತರಿಕ ಅಸ್ತಿರತೆಯಿಂದ ಬಳಲುತ್ತಿರುವ ಬಾಂಗ್ಲಾದೇಶಕ್ಕೆ ಆಘಾತವೊಂದು ಎದುರಾಗಿದ್ದು, ಈ ಹಿಂದೆ ಘೋಷಣೆಯಾಗಿದ್ದ ಭಾರತ ತಂಡದ ಬಾಂಗ್ಲಾ ಪ್ರವಾಸ ರದ್ದಾಗಿದ್ದು, ಶ್ರೀಲಂಕಾ ಜೊತೆ ಏಕದಿನ ಹಾಗೂ ಟಿ20 ಸರಣಿಯಾಡುವ ಕುರಿತು ಬಿಸಿಸಿಐ ಮಹತ್ವದ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.
ಈ ಹಿಂದೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಾಂಗ್ಲಾದೇಶದ ರಾಜಕೀಯ ಅಸ್ಥಿರತೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಟೀಂ ಇಂಡಿಯಾದ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಿತ್ತು.
ಇದೀಗ ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಿರುವ ಟೀಂ ಇಂಡಿಯಾ ಮುಂದಿನ ತಿಂಗಳು ಶ್ರೀಲಂಕಾ ಪ್ರವಾಸ (India’s Sri Lanka Tour) ಮಾಡಲಿದೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಈ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಬಗ್ಗೆ ಬಿಸಿಸಿಐ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಗಂಭೀರ ಚರ್ಚೆ ನಡೆಸುತ್ತಿವೆ ಎನ್ನಲಾಗಿದೆ.
ಬಾಂಗ್ಲಾದೇಶ ಸರಣಿ ರದ್ದಾಗಿದ್ದೇಕೆ?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಟೀಂ ಇಂಡಿಯಾ (Team India) ಮುಂದಿನ ತಿಂಗಳು ಏಕದಿನ ಮತ್ತು ಟಿ20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರವಾಸವನ್ನು ರದ್ದುಗೊಳಿಸಿರುವುದಾಗಿ ಬಿಸಿಸಿಐ (BCCI) ತಿಳಿಸಿತ್ತು. ಬಾಂಗ್ಲಾದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. ಇದರಿಂದಾಗಿ ಸರಣಿಯನ್ನು ಸೆಪ್ಟೆಂಬರ್ 2026 ರವರೆಗೆ ಮುಂದೂಡಲಾಗಿದೆ.
ಭಾರತ-ಲಂಕಾ ನಡುವೆ ಸರಣಿ
ಬಾಂಗ್ಲಾದೇಶ ಪ್ರವಾಸ ರದ್ದಾದ ಹಿನ್ನಲೆಯಲ್ಲಿ ಈಗ ಭಾರತ ತಂಡ ಆಗಸ್ಟ್ ತಿಂಗಳಲ್ಲಿ ಖಾಲಿ ಉಳಿಯುವ ಕಾರಣ ಬಿಸಿಸಿಐ ವೈಟ್ ಬಾಲ್ ಸರಣಿಯನ್ನು ಆಯೋಜಿಸಲು ಯೋಜನೆ ಹಾಕಿಕೊಂಡಿದೆ. ಅದರಂತೆ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಿದ್ದ ಶ್ರೀಲಂಕಾ ಪ್ರೀಮಿಯರ್ ಲೀಗ್ ಅನ್ನು ಮುಂದೂಡಲಾಗಿದೆ. ಇದರಿಂದಾಗಿ ಶ್ರೀಲಂಕಾದ ಆಗಸ್ಟ್ ವೇಳಾಪಟ್ಟಿಯೂ ಖಾಲಿಯಾಗಿದೆ. ಇದೇ ಕಾರಣಕ್ಕೆ ಬಿಸಿಸಿಐ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಗಳು ಏಕದಿನ ಮತ್ತು ಟಿ20 ಸರಣಿ ಆಯೋಜನೆಗೆ ಮುಂದಾಗಿವೆ ಎನ್ನಲಾಗಿದೆ.
ದಿನಾಂಕ ಅಂತಿಮವಾಗಿಲ್ಲ
ಕ್ರಿಕೆಟ್ ವೆಬ್ ಸೈಟ್ ವರದಿಯ ಪ್ರಕಾರ ಭಾರತ ಮತ್ತು ಶ್ರೀಲಂಕಾ ನಡುವಿನ ಏಕದಿನ ಮತ್ತು ಟಿ20 ಸರಣಿಯ ವೇಳಾಪಟ್ಟಿ ಇನ್ನೂ ಅಂತಿಮವಾಗಿಲ್ಲ. ಸರಣಿಯ ದಿನಾಂಕಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ, ಆದರೆ ಶ್ರೀಲಂಕಾ ಆಗಸ್ಟ್ 29 ರಿಂದ ಜಿಂಬಾಬ್ವೆ ಪ್ರವಾಸ ಮಾಡಬೇಕಾಗಿರುವುದರಿಂದ ಆಗಸ್ಟ್ ಮಧ್ಯದಲ್ಲಿ ಈ ಸರಣಿಯನ್ನು ನಡೆಸಬಹುದು ಎಂದು ಊಹಿಸಲಾಗಿದೆ.










Comments