top of page


ಬೋಸ್ರಿಂದ ಪವಾರ್ವರೆಗೆ.. ವೈಮಾನಿಕ ಅವಘಡಗಳಲ್ಲಿ ಮೃತಪಟ್ಟ ಗಣ್ಯರ ಪಟ್ಟಿ
ಮುಂಬೈ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಎನ್ಸಿಪಿ ಅಧ್ಯಕ್ಷ ಅಜಿತ್ ಪವಾರ್ ಅವರು ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಈ ಮೂಲಕ ವಿಮಾನ, ಹೆಲಿಕಾಪ್ಟರ್ ಅವಘಡಗಳಲ್ಲಿ ಮೃತಪಟ್ಟ ಭಾರತದ ರಾಜಕಾರಣಿಗಳು ಮತ್ತು ಗಣ್ಯ ವ್ಯಕ್ತಿಗಳ ಪಟ್ಟಿಗೆ ಸೇರಿದ್ದಾರೆ. 1945ರ ಆಗಸ್ಟ್ 18ರಂದು ತೈವಾನ್ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವಿಗೀಡಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಮೃತಪಟ್ಟ ಮೊದಲ ಭಾರತೀಯ ರಾಜಕಾರಣಿ ಎನ್ನಬಹುದು. 2011ರಲ್ಲಿ ಅರುಣಾಚಲ ಪ್ರದೇಶದ ಅಂದಿನ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು ಮತ್ತು 2009ರಲ್ಲಿ ಅವಿಭಜ
new waves technology
Jan 281 min read


Budget session |ಜಂಟಿ ಅಧಿವೇಶನ ಉದ್ದೇಶಿಸಿ ಮುರ್ಮು ಭಾಷಣ: ಪ್ರಮುಖಾಂಶಗಳು
ತಮ್ಮ ಭಾಷಣದ ಆರಂಭದಲ್ಲಿಯೇ ಡಾ. ಬಿ.ಆರ್ ಅಂಬೇಡ್ಕರ್ ಅವರ ದೂರದೃಷ್ಟಿಯ ನಿಲುವನ್ನು ಸ್ಮರಿಸಿದ ರಾಷ್ಟ್ರಪತಿ ಮುರ್ಮು, ಸಂವಿಧಾನದಲ್ಲಿ ಪ್ರತಿಪಾದಿಸಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಸಂವಿಧಾನವು ಯಾವುದೇ ಜಾತಿ-ಮತಗಳ ಬೇಧವಿಲ್ಲದೇ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶಗಳನ್ನು ನೀಡಿದೆ. ಸಾಮಾಜಿಕ ನ್ಯಾಯ ಎಂಬುದು ಕೇವಲ ಘೋಷಣೆಯಾಗಿ ಉಳಿಯದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬುದೇ ಸರ್ಕಾರದ ಮೂಲ ಉದ್ದೇಶ ಎಂದು ಪ್ರತಿಪಾದಿಸಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶವು ಸಾಧಿಸಿದ ಪ್ರಗತಿಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದ ರಾಷ್ಟ್ರಪತಿ, ಸರ್ಕಾರ ಜಾ
new waves technology
Jan 282 min read


ಶಬರಿಮಲೆ ಚಿನ್ನ ಕಳವು ಪ್ರಕರಣ:ಕೇರಳ,ಕರ್ನಾಟಕ, ತ.ನಾಡಿನ 21 ಸ್ಥಳಗಳಲ್ಲಿ ED ದಾಳಿ
ಕೊಚ್ಚಿ/ನವದೆಹಲಿ: ಶಬರಿಮಲೆ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ರಾಜ್ಯಗಳ 21 ಕಡೆಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಇ.ಡಿ ದಾಳಿ ನಡೆಸಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೋಟಿ ಅವರ ಬೆಂಗಳೂರಿನಲ್ಲಿರುವ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಕೇ
new waves technology
Jan 201 min read


10 ಗ್ರಾಂ ಚಿನ್ನಕ್ಕೆ ₹1.50 ಲಕ್ಷ: ₹3 ಲಕ್ಷ ದಾಟಿದ ಬೆಳ್ಳಿದರ
ಬೆಂಗಳೂರು: ಬೆಂಗಳೂರಿನ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟಿನಲ್ಲಿ ಕೆ.ಜಿ ಬೆಳ್ಳಿ ಧಾರಣೆಯು ₹3 ಲಕ್ಷ ದಾಟಿದೆ. 24 ಕ್ಯಾರಟ್ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂ ಗೆ ₹1.50 ಲಕ್ಷಕ್ಕೆ ತಲುಪಿದೆ. ಇದು ಚಿನ್ನ ಹಾಗೂ ಬೆಳ್ಳಿಯ ಈವರೆಗಿನ ದಾಖಲೆಯ ಬೆಲೆಯಾಗಿದೆ. 2024ರ ಜನವರಿ 19ರಂದು ಬೆಂಗಳೂರಿನಲ್ಲಿ ಕೆ.ಜಿ ಬೆಳ್ಳಿ ಬೆಲೆ ₹73 ಸಾವಿರ ಆಗಿತ್ತು. 2025ರ ಜನವರಿ 20ಕ್ಕೆ ₹96,200ಕ್ಕೆ ತಲುಪಿತು. ಈಗ (2026ರ ಜನವರಿ 19) ಬೆಂಗಳೂರಿನಲ್ಲಿ ಬೆಳ್ಳಿಯ ಬೆಲೆಯು ₹3,07,900ಕ್ಕೆ ಜಿಗಿದಿ ಮುಂದಿನ ದಿನಗಳಲ್ಲಿ ಬೆಳ್ಳಿ ಬೆಲೆಯು ಕೆ.ಜಿ.ಗೆ ₹3.5 ಲಕ್ಷಕ್ಕೂ ಏರಿಕೆ ಆಗಬಹುದು ಎಂದು ಬೆಂಗಳೂರು ಜ್ಯ
new waves technology
Jan 201 min read


ರಾಜ್ಯಕ್ಕೆ ಚಿಕ್ಕಾಸು; ಮಿತ್ರರಿಗೆ ನಿಧಿ: ಆಂಧ್ರ-ಬಿಹಾರಕ್ಕೆ ಭಾರಿ ಅನುದಾನ
ನವದೆಹಲಿ: ಕೇಂದ್ರದಲ್ಲಿ ಎನ್ಡಿಎ ಮೈತ್ರಿಕೂಟವು ಮೂರನೇ ಅವಧಿಗೆ ಅಧಿಕಾರಕ್ಕೆ ಬಂದ ಬಳಿಕ ಕರ್ನಾಟಕದ ಅಭಿವೃದ್ಧಿ ಯೋಜನೆಗಳಿಗೆ ಸಿಕ್ಕಿದ್ದು ಚಿಕ್ಕಾಸು. ಸರ್ಕಾರಕ್ಕೆ ಊರುಗೋಲು ಆಗಿರುವ ಮಿತ್ರರ ಸರ್ಕಾರ ಇರುವ ಆಂಧ್ರ ಪ್ರದೇಶ ಹಾಗೂ ಬಿಹಾರಕ್ಕೆ ಕೇಂದ್ರ ಸರ್ಕಾರ ಭರಪೂರ ಅನುದಾನ ನೀಡಿದೆ. ಕೇಂದ್ರ ಸರ್ಕಾರವು ಸಚಿವ ಸಂಪುಟದ ನಿರ್ಧಾರಗಳ ಮೂಲಕ ಈ ರಾಜ್ಯಗಳ ಅಭಿವೃದ್ಧಿ ಯೋಜನೆಗಳಿಗೆ ತಲಾ ₹1 ಲಕ್ಷ ಕೋಟಿಗೂ ಅಧಿಕ ಹಣ ಕೊಟ್ಟಿದೆ. ಕಳೆದ 17 ತಿಂಗಳುಗಳಲ್ಲಿ ಕೇಂದ್ರ ಸಚಿವ ಸಂಪುಟವು ರಾಜ್ಯದ ಎರಡು ಯೋಜನೆಗಳಿಗಷ್ಟೇ ಅನುಮೋದನೆ ಕೊಟ್ಟಿದೆ. ₹3,432 ಕೋಟಿ ಮೊತ್ತದ ಬಳ್ಳಾರಿ-ಚಿಕ್ಕಜಾಜೂರು ರೈಲು ಮಾರ್ಗ
new waves technology
Jan 201 min read


ಯುಎಇ ಅಧ್ಯಕ್ಷರ 3.5 ಗಂಟೆಗಳ ಭಾರತ ಪ್ರವಾಸ; ರಕ್ಷಣಾ ವಲಯ ಸೇರಿದಂತೆ ಬೃಹತ್ ಒಪ್ಪಂದ
ನವದೆಹಲಿ: ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸೋಮವಾರದಂದು ಭಾರತ ಪ್ರವಾಸ ಕೈಗೊಂಡಿದ್ದಾರೆ. ಕೇವಲ ಮೂರುವರೆ ಗಂಟೆಗಳ ಭಾರತದ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಕ್ಷಣಾ ವಲಯ ಸೇರಿದಂತೆ ಬೃಹತ್ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಿದ್ದಾರೆ.ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ ಯುಎಇ ಅಧ್ಯಕ್ಷರನ್ನು 'ಸಹೋದರ' ಎಂದು ಸಂಬೋಧಿಸಿದ್ದಾರೆ. ಮಾತುಕತೆಯಲ್ಲಿ ಭಾರತ ಹಾಗೂ ಯುಎಇ ನಡುವಣ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಲು ವಿಕೃತವಾದ ಕಾರ್ಯಸೂಚಿಯನ್ನು ನಿಗದಿಪಡಿಸಲಾಗಿದೆ. ಭಾರತ ಮತ್ತು ಯುಎಇ 2032ರವರೆಗೆ ಪ್ರತಿ ವರ್
new waves technology
Jan 201 min read


TN Assembly: ಸತತ 3ನೇ ಸಲ ಭಾಷಣ ಮಾಡದೇ ಹೊರನಡೆದ ರಾಜ್ಯಪಾಲ ಆರ್.ಎನ್.ರವಿ
ಚೆನ್ನೈ: ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ, ಇಂದು (ಮಂಗಳವಾರ) ರಾಜ್ಯ ಸರ್ಕಾರದ ಭಾಷಣವನ್ನು ಓದದೇ ವಿಧಾನಸಭೆಯಿಂದ ಹೊರನಡೆದಿದ್ದಾರೆ. ಇದರೊಂದಿಗೆ ಸತತ ಮೂರನೇ ವರ್ಷವೂ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದಲು ನಿರಾಕರಿಸಿದ್ದಾರೆ. 'ನನಗೆ ನಿರಾಸೆಯಾಗಿದೆ. ರಾಷ್ಟ್ರಗೀತೆಗೆ ಸರಿಯಾದ ಗೌರವ ಸಿಗಲಿಲ್ಲ' ಎಂದು ಆರ್.ಎನ್.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದನಕ್ಕೆ ಆಗಮಿಸಿದ ರವಿ ಅವರನ್ನು ಸ್ಪೀಕರ್ ಎಂ. ಅಪ್ಪಾವು ಅವರು ಸ್ವಾಗತಿಸಿದರು. ಆದರೆ ತಮಿಳುನಾಡು ವಿಧಾನಸಭೆಯನ್ನು ಉದ್ದೇಶಿಸಿ ಭಾಷಣ ಮಾಡದೇ ಹೊರಟು ಹೋದರು.
new waves technology
Jan 201 min read


PV Web Exclusive|ಕಲಬುರಗಿ ವಿಜ್ಞಾನ ಕೇಂದ್ರ: ವಿಜ್ಞಾನವೂ, ವಿನೋದವೂ, ಜ್ಞಾನವೂ..
ಕಲಬುರಗಿ: ಗುಲಬರ್ಗಾ (ಕಲಬುರಗಿ) ಎಂದಾಕ್ಷಣ ಮನದ ಸ್ಮೃತಿಪಟಲದಲ್ಲಿ ಬಹುತೇಕರಿಗೆ ಮೂಡುವ ಚಿತ್ರ; ಅದೊಂದು ಬರಪೀಡಿತ, ಹಿಂದುಳಿದ ಪ್ರದೇಶ. ಅಲ್ಲಿ ನೆತ್ತಿ ಬಿಡುವ ಬಿಸಿಲು. ನೀರಿನ ಸಮಸ್ಯೆ ಎದುರಿಸುತ್ತಿರುವ ಊರು ಎಂದೇ ಅಲ್ಲವೇ? ಹಿಂದುಳಿದ ಹಣೆಪಟ್ಟಿಯಾಚೆಗೆ ಕಣ್ಣಾಡಿಸಿದರೆ ವೈವಿಧ್ಯಮ ಸಂಗತಿಗಳು ನೋಟಕ್ಕೆ ದಕ್ಕುತ್ತವೆ. ಕಲಬುರಗಿ ಒಂದೊಮ್ಮೆ ಬಹಮನಿಗಳ ರಾಜಧಾನಿಯಾಗಿತ್ತು. ಆಧಾತ್ಮಿಕವಾಗಿ ಖಾಜಾ ಬಂದಾನವಾಜ್ ದರ್ಗಾ, ಭಕ್ತಿ ಪಂಥದಲ್ಲಿ ಶರಣಬಸವೇಶ್ವರರ ದೇವಸ್ಥಾನ ಈ ಭಾಗದ ಅಸ್ಮಿತೆಯಾಗಿ ನಿಂತಿವೆ. ಶ್ರದ್ದಾ ಕೇಂದ್ರವಾಗಿ ಬುದ್ಧವಿಹಾರವೂ ಚಿತ್ತಾಕರ್ಷಿಸುತ್ತಿದೆ. ಇವೆಲ್ಲಕ್ಕೂ ಮುಖ್ಯವಾದ ಮತ್ತೊ
new waves technology
Jan 171 min read


ಭೀಮಣ್ಣ ಖಂಡ್ರೆ: ಹೋರಾಟದ ಕೆಚ್ಚು, ಸ್ವಾಭಿಮಾನದ ಕಿಚ್ಚು...
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರೂ ಆದ ಮಾಜಿಸಚಿವ ಭೀಮಣ್ಣ ಖಂಡ್ರೆಯವರ ಇಡೀ ವ್ಯಕ್ತಿತ್ವವನ್ನು ವರ್ಣಿಸಲು ಈ ಮೇಲಿನ ಸಾಲು ಸಾಕು. ಸಮಾಜವಾದಿ ವಿಚಾರಧಾರೆಯ ಜಯಪ್ರಕಾಶ ನಾರಾಯಣ, ರಾಮ ಮನೋಹರ್ ಲೋಹಿಯಾ, ಅಶೋಕ್ ಮೆಹ್ರಾ ಅವರಿಂದ ಸಾಕಷ್ಟು ಪ್ರಭಾವಿತರಾಗಿದ್ದ ಖಂಡ್ರೆಯವರು ಅದನ್ನೇ ಮೈಗೂಡಿಸಿಕೊಂಡಿದ್ದರು. ಜೀವನದುದ್ದಕ್ಕೂ ಅದರಂತೆ ಬದುಕಿ ತೋರಿಸಿದರು. ಇದನ್ನೂ ಓದಿ: ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ ಯೌವನಾವಸ್ಥೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಿಂದ ಪ್ರೇರಣೆಗೊಂಡಿದ್ದ ಅವರು, ಅಂದಿನ ಹೈದರಾಬಾದ್ ಕರ್ನಾಟಕದ ರಜಾಕಾರರ ದೌರ್ಜನ್ಯದ ವಿರುದ್ಧ ಸೆಟೆದು ನಿಂತು, ಹೋರ
new waves technology
Jan 171 min read


ಜಿಬಿಎ ವ್ಯಾಪ್ತಿಯ ಐದು ಪಾಲಿಕೆ ಚುನಾವಣೆ: ಜೆಡಿಎಸ್-ಬಿಜೆಪಿ ಮೈತ್ರಿ
ಬೆಂಗಳೂರು: ಲೋಕಸಭೆ ಚುನಾವಣೆಯನ್ನು ಬಿಜೆಪಿ ಜತೆಗೂಡಿ ಎದುರಿಸಿದ್ದ ಜೆಡಿಎಸ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಾಲಿಕೆಗಳ ಚುನಾವಣೆಯಲ್ಲೂ ಮೈತ್ರಿಗೆ ಮುಂದಾಗಿದೆ. 'ಚುನಾವಣೆಯನ್ನು ಬಿಜೆಪಿ ಜತೆಗೆ ಮೈತ್ರಿಯೊಂದಿಗೇ ಎದುರಿಸೋಣ. ಮೈತ್ರಿಗೆ ಧಕ್ಕೆಯಾಗುವ ರೀತಿಯಲ್ಲಿ ಯಾರೂ ನಡೆದುಕೊಳ್ಳಬಾರದು ' ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಬೃಹತ್ ಮುಂಬೈ ನಗರ ಪಾಲಿಕೆಗೆ (ಬಿಎಂಸಿ) ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟವು ಸರಳ ಬಹುಮತ ಪಡೆದ ಬೆನ
new waves technology
Jan 171 min read


ಬೀದರ್: ಮಾಜಿ ಸಚಿವ ಭೀಮಣ್ಣ ಖಂಡ್ರೆ ನಿಧನ
ಬೀದರ್: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮಾಜಿಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಅವರು ಶುಕ್ರವಾರ ಇಲ್ಲಿನ ಅವರ ಸ್ವಗೃಹದಲ್ಲಿ ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಜೀವರಕ್ಷಕಗಳ ಮೂಲಕ ಒಂದು ವಾರ ಬೀದರ್ ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಆ್ಯಂಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಸತತವಾಗಿ ಆರೋಗ್ಯ ಕ್ಷೀಣಿಸಿದ ಕಾರಣ ಸೋಮವಾರ (ಜ.12) ಅವರನ್ನು ಮನೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಮನೆಯಲ್ಲಿಯೇ ವೈದ್ಯರ ತಂಡ ಅವರನ್ನು ಉಪಚರಿಸುತ್ತಿತ್ತು. ಆರೋಗ್ಯದಲ್ಲಿ ಚೇತರಿಕೆ
new waves technology
Jan 171 min read


ಬೃಹನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆ: ಠಾಕ್ರೆ ಭದ್ರಕೋಟೆ ಭೇದಿಸಿದ ಬಿಜೆಪಿ
ಮುಂಬೈ: ದೇಶದ ಗಮನ ಸೆಳೆದಿದ್ದ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿಯು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ, ಅವಿಭಜಿತ ಶಿವಸೇನಾ ಈ ಪಾಲಿಕೆಯಲ್ಲಿ ಕಳೆದ ಎರಡೂವರೆ ದಶಕಗಳಿಗೂ ಹೆಚ್ಚು ಕಾಲ ಹೊಂದಿದ್ದ ಪ್ರಾಬಲ್ಯವನ್ನು ಛಿದ್ರಗೊಳಿಸಿದೆ. ಬಿಎಂಸಿಯಲ್ಲಿ ತನ್ನ ಮೇಯರ್ ಹೊಂದಬೇಕು ಎಂಬ ಬಿಜೆಪಿಯ ದೀರ್ಘಕಾಲದ ಕನಸು ನನಸಾಗುವ ಗಳಿಗೆ ಕೂಡಿಬಂದಂತಾಗಿದೆ. ಇದಕ್ಕೆ ಮಿತ್ರಪಕ್ಷವಾದ ಶಿವಸೇನಾ (ಶಿಂದೆ ಬಣ) ಸಾಥ್ ನೀಡಿದೆ. ಬಿಎಂಸಿಯ ಒಟ್ಟು ಸದಸ್ಯ ಬಲ 227. ಬಿಜೆಪಿ ಹಾಗೂ ಶಿವಸೇನಾ (ಶಿಂದೆ ಬಣ) ಒಳಗೊಂಡ ಮೈತ್ರಿಕೂಟವು ಸರಳ ಬಹುಮತ ಪಡೆಯುವತ್ತ ಹೆಜ್ಜೆ ಇಟ್ಟಿದ್ದು,
new waves technology
Jan 171 min read


Bengaluru: ನಗರದಲ್ಲಿ 4 ವರ್ಷಗಳಲ್ಲಿ 9,450 ಮಂದಿ ಆತ್ಮಹತ್ಯೆ
ಬೆಂಗಳೂರು: ಕೌಟುಂಬಿಕ ಕಲಹ, ಆರ್ಥಿಕ ಸಂಕಷ್ಟ, ನಿರುದ್ಯೋಗ ಸೇರಿ ವಿವಿಧ ಕಾರಣಗಳಿಗೆ ನಗರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 9,450 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿ ದಿನ ಸರಾಸರಿ ಆರರಿಂದ ಏಳು ಜನರು ಆತ್ಮಹತ್ಯೆಯ ಮೂಲಕ ಕೊನೆಯುಸಿರೆಳೆಯುತ್ತಿದ್ದಾರೆ. ಮಾನಸಿಕ ಅನಾರೋಗ್ಯ ಸಮಸ್ಯೆಗಳು ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಕಾರಣವಾಗುತ್ತಿವೆ. ಗೃಹ ಇಲಾಖೆಯ ಮಾಹಿತಿ ಪ್ರಕಾರ, ನಗರದಲ್ಲಿ ಪ್ರತಿ ವರ್ಷ ಎರಡು ಸಾವಿರಕ್ಕೂ ಅಧಿಕ ಮಂದಿ ಆತ್ಮಹತ್ಯೆಯಿಂದ ಮೃತಪಡುತ್ತಿದ್ದಾರೆ. ಕಟ್ಟಡದಿಂದ ಜಿಗಿದು, ನೇಣು ಬಿಗಿದುಕೊಂಡು, ವಿಷ ಸೇವಿಸಿ, ರೈಲ್ವೆ ಹಳಿಗೆ ಹಾರಿ, ಗುಂಡು ಹಾರಿಸಿಕೊಂಡು ಸೇರಿ ವಿವಿ
new waves technology
Jan 61 min read


ಸ್ವಾದಭರಿತ ಹಾಲಿಗೆ ಶೇ 12ರಷ್ಟು ಜಿಎಸ್ಟಿ ಅಲ್ಲ, ಶೇ5 ವಿಧಿಸಿ: ಹೈಕೋರ್ಟ್
ಬೆಂಗಳೂರು: 'ಸ್ವಾದಭರಿತ ಹಾಲನ್ನು ಡೇರಿ ಉತ್ಪನ್ನವೆಂದು ಪರಿಗಣಿಸಬೇಕೇ ಹೊರತು ಪಾನೀಯ ಎಂದು ವರ್ಗೀಕರಿಸುವಂತಿಲ್ಲ. ಹಾಗಾಗಿ, ಅದಕ್ಕೆ ಶೇ 12ರಷ್ಟು ಜಿಎಸ್ಟಿ ವಿಧಿಸುವ ಬದಲು ಶೇ 5ರಷ್ಟು ಮಾತ್ರ ವಿಧಿಸಬೇಕು' ಎಂದು ಹೈಕೋರ್ಟ್ ಆದೇಶಿಸಿದೆ. ಈ ಸಂಬಂಧ 'ದೋಡ್ಲಾ' ಡೇರಿ ಲಿಮಿಟೆಡ್ ಕಂಪನಿ ಸಲ್ಲಿಸಿದ್ದ ರಿಟ್ ಅರ್ಜಿ ಪುರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿದಾರ ದೋಡ್ಡಾ ಕಂಪನಿ ಪಾವತಿ ಮಾಡಿರುವ ತೆರಿಗೆ ಹಣವನ್ನು ಮರು ಪಾವತಿಸುವಂತೆ ನಿರ್ದೇಶಿಸಿದೆ. 'ಸುವಾಸನೆಭರಿತ ಹಾಲನ್ನು ಹೊಂದಿರುವ ಪಾನೀಯಗಳು ಉದ್ದೇಶಿತ ಜಿಎಸ್ಟಿ ಸುಂಕದ ಶೀರ್ಷಿಕೆಯ
new waves technology
Jan 61 min read


ಬಳ್ಳಾರಿ ಗಲಭೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ 26 ಆರೋಪಿಗಳು
ಬೆಂಗಳೂರು: ಬಳ್ಳಾರಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಬಂಧಿತ 26 ಆರೋಪಿಗಳು ಸೋಮವಾರ ಮಧ್ಯಾಹ್ನದ ವೇಳೆಗೆ ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದರು.ಬಂಧಿತರನ್ನು ಬಿಗಿ ಭದ್ರತೆಯಲ್ಲಿ ಬಳ್ಳಾರಿಯಿಂದ ಕರೆತಂದು ಎಲ್ಲ ಆರೋಪಿಗಳನ್ನು, 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು, 'ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು' ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿಗ
new waves technology
Jan 61 min read


ಆಳ-ಅಗಲ; ಮಾದಕ ಪದಾರ್ಥ ಸಾಗಾಟ, ಮಾರಾಟ, ಬಳಕೆ ಅವ್ಯಾಹತ
ದೇಶದ ಈಶಾನ್ಯ ರಾಜ್ಯಗಳು ಮತ್ತು ಉತ್ತರದ ಕೆಲವು ರಾಜ್ಯಗಳಂತೆ ಕರ್ನಾಟಕದಲ್ಲಿಯೂ ಮಾದಕ ವಸ್ತುಗಳ ಬಳಕೆ, ಸಂಗ್ರಹ ಮತ್ತು ಕಳ್ಳಸಾಗಣೆ ವ್ಯಾಪಕವಾಗಿದೆ. ರಾಜ್ಯದಲ್ಲಿ ಮಾದಕ ದ್ರವ್ಯಗಳ ತಯಾರಿಕೆ, ಕೃಷಿ, ಸಂಗ್ರಹ, ಮಾರಾಟ, ವ್ಯಾಪಾರ, ಸಾಗಣೆ, ರಫ್ತು, ಆಮದು ಮತ್ತು ಬಳಕೆ ಸಂಬಂಧದ 'ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆ' (ಎನ್ಡಿಪಿಎಸ್) ಅಡಿ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇವುಗಳಲ್ಲಿ ಡ್ರಗ್ಸ್ ಸೇವನೆ ಮತ್ತು ಸಂಗ್ರಹಕ್ಕೆ ಸಂಬಂಧಿಸಿದ ಪ್ರಕರಣಗಳೇ ಅಧಿಕವಾಗಿವೆ. ಮಾದಕ ವಸ್ತುಗಳ ಬಳಕೆಯು ಯುವಕ, ಯುವತಿಯರಲ್ಲಿ ಹೆಚ್ಚಾಗುತ್ತಿದೆ. 'ಡ್ರಿಲ್'ನ ಬಯಕೆ, ಮೋಜು
new waves technology
Jan 61 min read


ಬಳ್ಳಾರಿ ಗಲಭೆ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ 26 ಆರೋಪಿಗಳು
ಬೆಂಗಳೂರು: ಬಳ್ಳಾರಿಯಲ್ಲಿ ನಡೆದಿದ್ದ ಗಲಭೆ ಪ್ರಕರಣದ ಬಂಧಿತ 26 ಆರೋಪಿಗಳು ಸೋಮವಾರ ಮಧ್ಯಾಹ್ನದ ವೇಳೆಗೆ ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದರು. ಬಂಧಿತರನ್ನು ಬಿಗಿ ಭದ್ರತೆಯಲ್ಲಿ ಬಳ್ಳಾರಿಯಿಂದ ಕರೆತಂದು ಎಲ್ಲ ಆರೋಪಿಗಳನ್ನು, 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಅವರ ಮುಂದೆ ಹಾಜರು ಪಡಿಸಲಾಯಿತು. ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು, 'ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು' ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.ಇದನ್ನು ಪರಿಗಣಿಸಿದ ನ್ಯಾಯಾಧೀಶರು, ಜಾಮೀನು ಅರ್ಜಿ
new waves technology
Jan 61 min read


ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ಕಾಡಿನಲ್ಲಿ ನಡೆದು ಮೃತಪಟ್ಟ ತುಂಬು ಗರ್ಭಿಣಿ!
ಗಡ್ಚಿರೋಲಿ: ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ದೇಶದ ಕೆಲ ಹಳ್ಳಿಗಳು ಈಗಲೂ ರಸ್ತೆ ಸಂಪರ್ಕ, ವೈದ್ಯಕೀಯ ಸೇವೆಗಳಿಂದ ವಂಚಿತವಾಗಿವೆ ಎಂಬುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ವರದಿ ತಿಳಿಸಿದೆ.ತೆರಿಗೆ ವಸೂಲಿಯಲ್ಲಿ ದೇಶದಲ್ಲಿ ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯದ ಗಡ್ಚಿರೋಲಿ ಜಿಲ್ಲೆಯಿಂದ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ. ಮುಖ್ಯ ರಸ್ತೆಗೆ ಸಂಪರ್ಕ ಕಡಿತಗೊಂಡಿರುವ ಮತ್ತು ವೈದ್ಯಕೀಯ ಸೌಲಭ್ಯವಿಲ್ಲದ ಗ್ರಾಮವೊಂದರ ತುಂಬು ಗರ್ಭಿಣೆಯೊಬ್ಬರು ಹೆರಿಗೆ ಸೌಲಭ್ಯಕ್ಕಾಗಿ 6 ಕಿ.ಮೀ ನಡೆದು ಮೃತಪಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಗಡ್ಚಿರೋಲಿ ಜಿಲ್
new waves technology
Jan 31 min read


ಏಕದಿನ ವಿಶ್ವಕಪ್ನಲ್ಲಿ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ: ಏಕೆ ಗೊತ್ತೇ?
ಭಾರತದ ಆತಿಥ್ಯದಲ್ಲೇ 2023ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಗಿದು ಎರಡು ತಿಂಗಳು ಕಳೆಯುವುದರೊಳಗೆ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) 2024ರ ಟಿ20 ವಿಶ್ವಕಪ್ ವೇಳಾಪಟ್ಟಿಯನ್ನು ಪ್ರಕಟಿಸಿತ್ತು. ಟೀಂ ಇಂಡಿಯಾ ಅಭಿಮಾನಿಗಳು, ವಿಶ್ವಕಪ್ ಫೈನಲ್ ಸೋಲಿನ ಬೇಸರದಿಂದ ಇನ್ನೂ ಹೊರಬಂದಿರಲಿಲ್ಲ. ಸೋಲಿಗಿಂತಲೂ, ಗೆದ್ದ ತಂಡ ಆಸ್ಟ್ರೇಲಿಯಾದ ಆಟಗಾರ ಮಿಚೇಲ್ ಮಾರ್ಶ್ ಅವರು ಟ್ರೋಫಿ ಮೇಲೆ ಕಾಲಿಟ್ಟು ಸಂಭ್ರಮಿಸಿದ್ದು, ಹೆಚ್ಚು ನೋವು ನೀಡಿತ್ತು. ಕೊಹ್ಲಿಯಂತಹ ಬ್ಯಾಟರ್ಗಳು ಬೆನ್ನುಬೆನ್ನಿಗೆ ಶತಕ ಗಳಿಸಬೇಕು. ರೋಹಿತ್ ಶರ್ಮಾ ಅಂಥವರ ಬ್ಯಾಟ್ಗಳು ಪ್ರತಿ ಎಸೆತವನ್ನೂ ಸಿಕ್
new waves technology
Jan 31 min read


ಬಳ್ಳಾರಿ ಘರ್ಷಣೆ: ಬಿದ್ದಿದ್ದು ಭರತ್ ಕಡೆಯವರ ಗುಂಡು
ಬಳ್ಳಾರಿ: 'ನಗರದಲ್ಲಿ ಗುರುವಾರ ರಾತ್ರಿ ಸಂಭವಿಸಿದ ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ (28) ಅವರ ದೇಹದಲ್ಲಿ ಪತ್ತೆಯಾದ ಗುಂಡು, ಬಳ್ಳಾರಿ ನಗರದ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಕಡೆಯ ಖಾಸಗಿ ಅಂಗರಕ್ಷಕರದ್ದೇ' ಎಂದು ಪೊಲೀಸ್ ಇಲಾಖೆ ನಿಕಟ ಮೂಲಗಳಿಂದ ಖಚಿತವಾಗಿದೆ. ರಾಜಶೇಖರ ಅವರ ಶವದ ಮರಣೋತ್ತರ ಪರೀಕ್ಷೆ ಬಳ್ಳಾರಿಯ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ (ಬಿಎಂಸಿಆರ್-ವಿಮ್ಸ್) ನಡೆಯಿತು. 'ದೇಹದಲ್ಲಿ '12 ಎಂಎಂ-ಸಿಂಗಲ್ಬೋರ್'ನ ಗುಂಡಿನ 'ವಾರ್ಡ್' ಪತ್ತೆಯಾಗಿದೆ. ಅದು ಶಾಸಕ ನಾರಾ ಭರತ್ ರೆಡ್ಡಿ ಅವರ ಕಡೆಯವರ ಬಂದೂಕಿನ ಗುಂಡಿನ ಜೊತೆ ಹೊಂದಾಣಿಕೆ
new waves technology
Jan 31 min read


SSLC ಮುಖ್ಯ ಪರೀಕ್ಷೆಗೆ ಮೂರು ಹಂತಗಳಲ್ಲಿ ಪೂರ್ವ ಸಿದ್ಧತೆ: ಇಲ್ಲಿದೆ ವೇಳಾಪಟ್ಟಿ
ಬೆಂಗಳೂರು: 2025-26ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಮೊದಲ ಹಂತದ ಪೂರ್ವ ಸಿದ್ಧತಾ ಪರೀಕ್ಷೆಗಳು ಸೋಮವಾರದಿಂದ (ಜನವರಿ 5) ಆರಂಭವಾಗಲಿವೆ.ಮುಖ್ಯ ಪರೀಕ್ಷೆಗೆ ಮೂರು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್ಇಎಬಿ) ಈಗಾಗಲೇ ವೇಳಾಪಟ್ಟಿಗಳನ್ನು ಪ್ರಕಟಿಸಿದೆ. ಈ ಸಂಬಂಧ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಪೂರ್ವ ಸಿದ್ಧತಾ ಪರೀಕ್ಷೆಯು ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ದಿಕ್ಕೂಚಿಯಾಗಿರಲಿದೆ ಎಂದು ತಿಳಿಸಿದೆ. ಪರೀಕ್ಷೆಗಳು ಯಾವಾಗ? ಮೊದಲ ಹಂತ: 2026ರ ಜನವರಿ 5ರಿಂದ 10 ಎರಡನೇ ಹಂತ
new waves technology
Jan 31 min read


ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆ: ಅವಿರೋಧ ಆಯ್ಕೆಯಲ್ಲಿ ಮಹಾಯುತಿ ಮೇಲುಗೈ
ಮುಂಬೈ: ಮಹಾರಾಷ್ಟ್ರದಲ್ಲಿ ಇದೇ 15ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಅವಿರೋಧ ಆಯ್ಕೆಯಲ್ಲಿ ಬಿಜೆಪಿ ಮತ್ತು ಅದರ ನೇತೃತ್ವದ ಮಹಾಯುತಿ ಮೈತ್ರಿಕೂಟದ ಮಿತ್ರ ಪಕ್ಷಗಳ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ರಾಜ್ಯದಾದ್ಯಂತ ಬಿಜೆಪಿ ಮತ್ತು ಅದರ ಮಹಾಯುತಿ ಮಿತ್ರಪಕ್ಷಗಳು 68 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿವೆ. ಈ ಆಯ್ಕೆಯನ್ನು ಖಂಡಿಸಿರುವ ವಿರೋಧ ಪಕ್ಷಗಳು, ಆಡಳಿತ ಪಕ್ಷವು ಬೆದರಿಕೆ ಮತ್ತು ಹಣವನ್ನು ಬಳಸಿಕೊಂಡು ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಯುವಂತೆ ಮಾಡಿದೆ ಎಂದು ಆರೋಪಿಸಿವೆ. ರಾಜ್ಯದಾದ್ಯಂತ, ಬಿಜೆಪಿ ಮತ್ತು ಮಹಾಯುತಿಯಿಂದ 68 ಅಭ್ಯರ್ಥಿಗ
new waves technology
Jan 31 min read


ಪುಟಿನ್ ನಿವಾಸ ಗುರಿಯಾಗಿಸಿ ಉಕ್ರೇನ್ ದಾಳಿ: ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ನವದೆಹಲಿ: ಉಕ್ರೇನ್ ಸೇನೆಯು ರಷ್ಯಾ ಅಧ್ಯಕ್ಷ ವ್ಹಾದಿಮಿರ್ ಪುಟಿನ್ ಅವರ ನಿವಾಸವನ್ನು ಗುರಿಯಾಗಿಸಿ ಡೋನ್ ದಾಳಿ ನಡೆಸಿದೆ ಎಂದು ರಷ್ಯಾ ಆರೋಪಿಸಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಯುದ್ಧವನ್ನು ಕೊನೆಗಾಣಿಸಲು ಮತ್ತು ಶಾಂತಿಯನ್ನು ಕಾಪಾಡಲು ರಾಜತಾಂತ್ರಿಕತೆಯೇ ವಿಶ್ವಾಸಾರ್ಹ ಮಾರ್ಗವಾಗಿದೆ ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ರಷ್ಯಾದ ಅಧ್ಯಕ್ಷ ಪುಟಿನ್ ನಿವಾಸದ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ನಾವು ತೀವ್ರ ಕಳವಳಗೊಂಡಿದ್ದೇವೆ. ಯುದ್ಧವನ್ನು ಅಂತ್ಯಗೊಳಿಸಲು ಮತ್ತು ಶಾಂತಿಯನ್ನು ಕಾಪಾಡಲು ರಾಜತಾಂತ್ರಿಕ ಪ್ರಯತ್ನ
new waves technology
Dec 30, 20251 min read


ಹೊಸವರ್ಷದ ಸಂಭ್ರಮದಲ್ಲಿ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ: ಸಿದ್ದರಾಮಯ್ಯ ಮನವಿ
ಬೆಂಗಳೂರು: 2026ರ ಹೊಸ ವರ್ಷವನ್ನು ಅತ್ಯಂತ ಸಂತೋಷ- ಸಂಭ್ರಮದಿಂದ ಬರಮಾಡಿಕೊಳ್ಳುವ ಜೊತೆಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 'ಹೊಸವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಿಮ್ಮ ಸುರಕ್ಷತೆಯನ್ನು ನಾವು ಆದ್ಯತೆಯಾಗಿಟ್ಟುಕೊಂಡಿದ್ದೇವೆ. ಹೀಗಾಗಿ ಹೆಚ್ಚುವರಿ ಗಸ್ತು ವ್ಯವಸ್ಥೆ, ತುರ್ತು ಪ್ರತಿಕ್ರಿಯಾ ಘಟಕ ಹಾಗೂ ಅಗತ್ಯ ಬೆಂಬಲ ವ್ಯವಸ್ಥೆಯೊಂದಿಗೆ ಬೆಂಗಳೂರು ನಗರ ಪೊಲೀಸರು ಸಕಲ ತಯಾರಿ ಮಾಡಿಕೊಂಡಿದ್ದಾರೆ' ಎಂದು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು, ಜೀವಹಾನಿಯಾಗದಂತೆ
new waves technology
Dec 30, 20251 min read
bottom of page

